ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಸಂಸ್ಥೆ ವರ್ಷದೊಳಗೆ ಆರಂಭ: ಅಶೋಕ್ ರೈ

ಪುತ್ತೂರು: ಒಂದು ವರ್ಷದೊಳಗಾಗಿ ಪುತ್ತೂರಿನಲ್ಲಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಸೆಂಟ್ರಲ್ ಇಂಟಲಿಜೆನ್ಸ್ ಸಂಸ್ಥೆ ಕಚೇರಿ ಆರಂಭವಾಗಲಿದೆ. ಇದಕ್ಕಾಗಿ ನಿವೇಶನ ಮಂಜೂರು ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಹಿತಿ ನೀಡಿದ್ದಾರೆ.

ಇದಕ್ಕಾಗಿ ಪಡ್ನೂರಿನಲ್ಲಿ 0.44 ಸೆಂಟ್ಸ್ ಸ್ಥಳ ಮಂಜೂರಾಗಿದೆ. ಕಳೆದ ಎರಡು ತಿಂಗಳ ಹಿಂದೆ ತಮ್ಮ ಬಳಿ ಇಂಟಲಿಜೆನ್ಸ್ ಎಸ್.ಪಿ. ಅವರು ನಿವೇಶನಕ್ಕಾಗಿ ‌ಮನವಿ ಮಾಡಿದ್ದರು. ಅದರಂತೆ ಪಡ್ನೂರಿನಲ್ಲಿ ಜಾಗ ಮಂಜೂರು ಮಾಡಲಾಗಿದೆ. ಈ ಸಂಸ್ಥೆ ಆರಂಭಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಇಲಾಖೆಯೇ ಕಚೇರಿ ನಿರ್ಮಾಣದ ಎಲ್ಲಾ ಕೆಲಸಗಳನ್ನು ಮಾಡಲಿದೆ ಎಂದ ಅವರು, ನಿವೇಶನದ ಪಹಣಿ ಪತ್ರವನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.





















































 
 
error: Content is protected !!
Scroll to Top