ಮಣಿಪಾಲ: ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೈಕ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.ಆರೋಪಿಗಳನ್ನು ನೇತಾಜಿನಗರದ ಶರತ್(26) ಮತ್ತು ಗಣೇಶ್(31) ಎಂದು ಗುರುತಿಸಲಾಗಿದೆ.
ರಾಹುಲ್ ನಗರದ ವೀರಮಾರುತಿ ಭಜನಾ ಮಂದಿರದ ಸಮೀಪ ನಿಲ್ಲಿಸಲಾದ ಬೈಕ್ ಕಳ್ಳತನವಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುದರ್ಶನ್ ಎಂಬವರು ದೂರು ದಾಖಲು ಮಾಡಿದ್ದರು. ಪ್ರಕರಣದ ಆರೋಪಿಗಳನ್ನು ಕೇವಲ 11 ಗಂಟೆಯೊಳಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕದ್ದ ಬೈಕ್ ಅನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.
ಕಳ್ಳರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸುಗಳಿವೆ ಎಂದು ತಿಳಿದು ಬಂದಿದೆ.
























