ಫಾರಿನ್ ಆ್ಯಕ್ಟ್ ಉಲ್ಲಂಘನೆ: 12 ವರ್ಷಗಳ ಬಳಿಕ ಆರೋಪಿ ಅಂದರ್

ಬಂಟ್ವಾಳ: ಫಾರಿನ್ ಆ್ಯಕ್ಚ್ ಉಲ್ಲಂಘನೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳದಲ್ಲಿ ಬಂಧಿಸಲಾಗಿದೆ.ಬಂಧಿತನನ್ನು ಉಡುಪಿಯ ನಿವಾಸಿ ತಾಜ್ ಮೊಹಮ್ಮದ್ ಯೂಸಫ್ (59) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ 2014ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದೇಶಿಯರ ಕಾಯ್ದೆ ಕಲಂ 14(a)(b), 14(c) m 2 2 340 ಅಡಿಯಲ್ಲಿ ಪ್ರಕರಣ (ಕ್ರೈಂ ನಂಬರ್: 152/2014) ದಾಖಲಾಗಿತ್ತು. ಪ್ರಕರಣ ದಾಖಲಾದಾಗಿನಿಂದಲೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





















































 
 

error: Content is protected !!
Scroll to Top