ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ ಯುವತಿ?

ಪುತ್ತೂರು: ಯುವಕನೊಬ್ಬ ವಿವಾಹವಾಗುವುದಾಗಿ ‌ನಂಬಿಸಿ ಮಗು ಕರುಣಿಸಿ ಬಳಿಕ ಕೈಕೊಟ್ಟ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಸಂತ್ರಸ್ತ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದು, ಪೋಷಕರು ತಕ್ಷಣವೇ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾಗಿ ಸುದ್ದಿ ಹಬ್ಬಿದೆ.

ಆರೋಪಿ ಯುವಕ ಜೈಲಿನಿಂದ ಹೊರಬಂದ ಬಳಿಕ ಯುವತಿ ಮಾನಸಿಕವಾಗಿ ಬಹಳಷ್ಟು ನೊಂದಿದ್ದಳು. ಯುವಕನ ಕಡೆಯವರು ಜಿದ್ದಿನಿಂದ ಮದುವೆ ನಡೆದಿಲ್ಲ. ಹಲವಾರು ಜನರು ಈ ಸಂಬಂಧ ಸಂಧಾನ ನಡೆಸಿ, ವಿವಾಹ ನಡೆಸುವುದಕ್ಕೆ ಪ್ರಯತ್ನ ಮಾಡಿದ್ದರೂ ಸಹ ಯಾವುದೇ ಉಪಯೋಗವಾಗಿಲ್ಲ.

ಇದೆಲ್ಲದರ ನಡುವೆ ಯುವತಿ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಮನೆಗೆ ಸಿಸಿಟಿವಿ ಸಹ ಅಳವಡಿಸಲಾಗಿತ್ತು.





















































 
 

ಈ ಎಲ್ಲಾ ಘಟನೆಗಳಿಂದ ಮತ್ತಷ್ಟು ನೊಂದಿರುವ ಯುವತಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಗಿ ತಿಳಿದು ಬಂದಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಚೇತರಿಸಿಕೊಳ್ಳುತ್ತಿರುವುದಾಗಿಯೂ ಮೂಲಗಳಿಂದ ತಿಳಿದು ಬಂದಿದೆ.

error: Content is protected !!
Scroll to Top