ವಿದ್ಯಾರತ್ನ ‌ಪ್ರಶಸ್ತಿಗೆ ದಯಾಮಣಿ ಕೆ. ಭಾಜನ : ಮಾರ್ಚ್ 1 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು, ಇವರು ಶಿಕ್ಷಣ ಕ್ಷೇತ್ರದಲ್ಲಿ ಆತ್ಯುತ್ತಮ ಸೇವೆಗೈದಿರುವವರಿಗೆ ನೀಡುವ ವಿದ್ಯಾರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲೆ ದಯಾಮಣಿ ಕೆ. ಇವರು ಭಾಜನರಾಗಿದ್ದಾರೆ.

ಇವರಿಗೆ ದಿನಾಂಕ ಮಾರ್ಚ್ 1 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ.) ಬೆಂಗಳೂರು ಇದರ ರಾಜ್ಯ ಮಟ್ಟದ ಸಮಾವೇಶ ಮತ್ತು ಗಣ್ಯರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ -2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಗುತ್ತಿದ್ದು, ಶಿಕ್ಷಣ ಸಚಿವ ಮಧು ಬಂಗರಾಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿಸಲಿದ್ದಾರೆ.

ಶ್ರೀಮತಿ ದಯಾಮಣಿ ಅವರು ಕಡಬ ತಾಲೂಕಿನ ಪಂಜದ ಕರಿಕ್ಕಳದಲ್ಲಿರುವ ಕಂಬಳ ಮನೆತನದವರಾಗಿದ್ದಾರೆ. ಇವರು ಪುತ್ತೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮತ್ತು ಎವಿಜಿ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗಳ ಉಪಾಧ್ಯಕ್ಷರು, HEF ಇದರ ನಿರ್ದೇಶಕರು ಮತ್ತು ರೋಟರಿ ಸ್ವರ್ಣ ಇದರ ಪದಾಧಿಕಾರಿಯೂ ಆಗಿರುವ ಶ್ರೀ ಮಹಾಲಿಂಗೇಶ್ವರ ಐಟಿಐನ ನಿವೃತ್ತ ಉದ್ಯೋಗಿಯಾಗಿರುವ ಉಮೇಶ್ ಮಳುವೇಲು ಇವರ ಪತ್ನಿ. ಇವರ ಮಗಳು ಸಹನಾ, ಅಳಿಯ ಮತ್ತು ಮೊಮ್ಮಕ್ಕಳು ದುಬೈನಲ್ಲಿ ವಾಸವಾಗಿದ್ದಾರೆ.





















































 
 

error: Content is protected !!
Scroll to Top