ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನ (ಗ್ರಾಜ್ಯುಯೇಷನ್ ಡೇ) ಏರ್ಪಡಿಸಲಾಯಿತು.
ಸಮಾರಂಭವನ್ನು ಎಸ್. ಎನ್. ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯೆ ರಶ್ಮಿ ಅಶ್ವಿನ್ ಎಲ್. ಶೆಟ್ಟಿ ಅವರು ಉದ್ಘಾಟಿಸಿದರು.
ಅತಿಥಿಯಾಗಿ ಸವಣೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಂತ್ ವೈ. ಅವರು ಮಕ್ಕಳೇ ನಮ್ಮ ಆಸ್ತಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ, ಸರಿಯಾದ ಗುರಿ, ಗುರುಗಳ ಮೇಲೆ ಗೌರವ ಇರಬೇಕು ಎಂಬ ಹಿತನುಡಿಯೊಂದಿಗೆ ಶುಭ ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ಅಢ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸುತ್ತಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಬಳಿಕ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿ ಉತ್ತಮ ಪ್ರಜೆಯನ್ನಾಗಿ ಮಾಡಿ ಎಂದರು.
ಪೋಷಕರಾದ ಸುಶ್ಮಿತ ಸಂಸ್ಥೆಯ ಬಗ್ಗೆ ಅಭಿಪ್ರಾಯ ವ್ಯಕ್ತ್ತಪಡಿಸಿದರು.
ಸಮಾರಂಭದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ರಾಜಾಲಕ್ಷ್ಮಿ ಎಸ್., ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.
3ನೆ ತರಗತಿಯ ಐಶಾನಿ ಜೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಒಂದನೆ ತರಗತಿಯ ಅಹಿಲ್ ಅಹಮ್ಮದ್ ಅವರಿಂದ ಸಂವಿಧಾನದ ಪೀಠಿಕೆ ವಾಚನ, ಯುಕೆಜಿಯ ದಿಯ ಅವರು ಸ್ವಾಗತ ಮತ್ತು ಯುಕೆಜಿಯ ಅಮೀರಾ ಫಾತಿಮ ವಂದನಾರ್ಪಣೆ ಮಾಡಿದರು.
ಶಿಕ್ಷಕಿಯರಾದ ಸುನೀತಾ ಜೆ. ಕೆ. ಮತ್ತು ತಿರುಮಲೇಶ್ವರಿ ಸಹಕರಿಸಿದರು.
























