ಬಂಟ್ವಾಳ: ಕೃಷಿ ಸಂಬಂಧಿ ಕೆಲಸದಲ್ಲಿ ತೊಡಗಿಕೊಂಡಿದ್ದ ಯುವಕನೊಬ್ಬ ಎದೆನೋವಿನ ಕಾರಣಕ್ಕೆ ಹೃದಯಾಘಾತದಿಂದ ಮೃತಪಟ್ಚ ಘಟನೆ ಕುಕ್ಕಿಪಾಡಿ ಎಂಬಲ್ಲಿ ನಡೆದಿದೆ.
ಮೃತನನ್ನು ಪ್ರಶಾಂತ್ ಆಚಾರ್ಯ (24) ಎಂದು ಗುರುತಿಸಲಾಗಿದೆ.
ಇವರು ಕುಕ್ಕಿಪಾಡಿ ಗ್ರಾಮದ ಮಾಡಮೆ ಎಂಬಲ್ಲಿನ ಶ್ರೀರಾಮ ಆಚಾರ್ಯ ಅವರ ಎರಡನೇ ಪುತ್ರ. ಸಿದ್ಧಕಟ್ಟೆಯ ಯಂತ್ರೋಪಕರಣದ ಅಂಗಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಭಾನುವಾರ ಅರಂತಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸಿದ್ಧಕಟ್ಟೆಯ ಆಸ್ಪತ್ರೆಯ ವೈದ್ಯರ ನಿರ್ದೇಶನದಂತೆ ಮೂಡುಬಿದಿರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
























