ಬೃಹತ್ ಮರ ಮುರಿದು ಬಿದ್ದು ಕಾರು ಜಖಂ

ಸುಳ್ಯ: ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಪವಾಡ ಸದೃಶ ಎಂಬಂತೆ ಪಾರಾದ ಘಟನೆ ಬೇಂಗಮಲೆ ಎಂಬಲ್ಲಿ ನಡೆದಿದೆ.

ಬೆಳ್ಳಾರೆಯ ಪಂಜದ ಕಡೆಗೆ ಉಮ್ಮರ್ ಎಂಬವರ ಬಾಡಿಗೆ ಕಾರಿನಲ್ಲಿ ಸಾಲ ವಸೂಲಾತಿ ಕೆಲಸಕ್ಕೆ ಬ್ಯಾಂಕ್ ಮೆನೇಜರ್ ಉತ್ಸವ್ ಚಕ್ರವರ್ತಿ ಅವರು ಪ್ರಯಾಣಿಸುತ್ತಿದ್ದರು. ಕೆಲಸ ಮುಗಿಸಿ ಮರಳುವ ವೇಳೆ ಬೃಹತ್ ಮರ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿದ್ದಾರೆ.





















































 
 

error: Content is protected !!
Scroll to Top