ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ

ಪ್ರತಿಭಟನೆಗೆ ಸಂಚು ರೂಪಿಸಿದ್ದ ಉದಯ್‌ ಭಾನು ಚಿಬ್‌

ನವದೆಹಲಿ: ಭಾರತ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಹಲವಾರು ಸುತ್ತಿನ ವಿಚಾರಣೆಯ ನಂತರ ಬಂಧಿಸಲಾಗಿದೆ. ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ.





















































 
 

ಎಐ ಸಭೆಯಲ್ಲಿ ಶರ್ಟ್‌ಲೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸುಮಾರು 15 ಗಂಟೆಗಳ ವಿಚಾರಣೆಯ ನಂತರ ಚಿಬ್ ಅವರನ್ನು ಬಂಧಿಸಲಾಗಿದೆ. ಚಿಬ್ ವಿಚಾರಣೆಯ ಸಮಯದಲ್ಲಿ ಸಹಕರಿಸಲಿಲ್ಲ. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಬ್‌ನನ್ನು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಪ್ರಕರಣದಲ್ಲಿ ಇದು ಎಂಟನೇ ಬಂಧನವಾಗಿದೆ.

ವಿದೇಶಗಳ ಅನೇಕ ಗಣ್ಯರು ಪಾಲ್ಗೊಂಡಿದ್ದ ಜಾಗತಿಕ ಎಐ ಶೃಂಗ ನಡೆಯುತ್ತಿರುವಾಗ ಕೆಲ ಯುವ ಕಾಂಗ್ರೆಸ್‌ ವೀಕ್ಷಕರ ಪಾಸ್‌ ಪಡೆದುಕೊಂಡು ಒಳನುಗ್ಗಿ ಶರ್ಟ್‌ ಕಳಚಿ ಮೋದಿ ವಿರುದ್ಧ ಕಿಡಿ ಕಾರಿ ಪ್ರತಿಭಟನೆಗೆ ಮುಂದಾಗಿದ್ದರು. ಕೂಡಲೇ ಎಚ್ಚೆತ್ತ ಅಲ್ಲಿದ್ದ ಸಾರ್ವಜನಿಕರು ಮತ್ತು ಸೆಕ್ಯೂರಿಟಿಯವರು ಅವರನ್ನು ಅಲ್ಲಿಂದ ಒದ್ದೋಡಿಸಿದ್ದಾರೆ. ಒದ್ದೋಡಿಸುತ್ತಿರುವ ವಿಡಿಯೋ ದೃಶ್ಯಗಳು ಭಾರಿ ವೈರಲ್‌ ಆಗಿದ್ದು, ಜಾಗತಿಕ ಮಟ್ಟದ ಕಾರ್ಯಕ್ರಮವಾಗುವಾಗ ಭಾರತದ ಮಾನ ಕಳೆಯುವ ಉದ್ದೇಶದಿಂದ ಯುವ ಕಾಂಗ್ರಸ್‌ನವರು ನಡೆಸಿದ ಪ್ರತಿಭಟನೆಗೆ ಹಲವು ಕಾಂಗ್ರೆಸ್‌ ನಾಯಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ದೇಶಾದ್ಯಂತ ಜನರು ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ರಸ್‌ಗೆ ಛೀಮಾರಿ ಹಾಕುತ್ತಿದ್ದಾರೆ.

error: Content is protected !!
Scroll to Top