ಎಸ್‌ಐಟಿ ತನಿಖೆಯಿಂದ ಬಯಲಾಯಿತು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಯ ಅಸಲಿ ಕಾರಣ

ರಿಯಲ್‌ ಎಸ್ಟೇಟ್‌ ಉದ್ಯಮಿಯ ಆತ್ಮಹತ್ಯೆಗೆ ಇದೇ ಕಾರಣವಂತೆ

ಬೆಂಗಳೂರು: ಇಡೀ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಹಿಂದಿನ ಕಾರಣ ಈಗ ಬಯಲಾಗಿದೆ. ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಎಸ್‌ಐಟಿ ಅಧಿಕಾರಿಗಳ ಇಲ್ಲಿಯವರೆಗಿನ ತನಿಖೆಯಲ್ಲಿ ರಾಯ್ ಆತ್ಮಹತ್ಯೆ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ.

ಒಂದೇ ಕಾರಣದಿಂದ ರಾಯ್ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಇಲ್ಲಿಯವರೆಗಿನ ಎಸ್‌ಐಟಿ ತನಿಖೆಯ ವೇಳೆ ಬಹಿರಂಗವಾಗಿದೆ ಎನ್ನಲಾಗುತ್ತಿದೆ. ಅದ್ದೂರಿ ಜೀವನ ಶೈಲಿ, ಮಾನಸಿಕ ಒತ್ತಡ, ವ್ಯವಹಾರದ ಸಮಸ್ಯೆಗಳು ಹೀಗೆ ಹಲವು ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.





















































 
 

ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ರೂಂನಲ್ಲಿ ಸಿಕ್ಕಿರುವ ಡೈರಿ, ಶೂಟ್ ಮಾಡಿಕೊಂಡ ಪಿಸ್ತೂಲ್, ಮೊಬೈಲ್, ರೂಂ ಡೋರ್‌ನ ಲಾಕರ್ ಹೀಗೆ 30ಕ್ಕೂ ಹೆಚ್ಚು ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಮುಂದಿನ ವಾರದ ಒಳಗಾಗಿ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಅಧಿಕಾರಿಗಳ ಕೈ ಸೇರಲಿದೆ. ಎಫ್‌ಎಸ್‌ಎಲ್ ವರದಿ ಕೈ ಸೇರುತ್ತಿದ್ದಂತೆ ಅಂತಿಮ ವರದಿ ಸಲ್ಲಿಕೆ ಮಾಡಲು ಎಸ್‌ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.

ಆದಾಯ ಕರ ಇಲಾಖೆ ದಾಳಿ ನಡೆಯುತ್ತಿರುವಾಗಲೇ ತನ್ನ ಆಫೀಸ್‌ ಚೇಂಬರ್‌ನಲ್ಲಿ ಸಿ.ಜೆ. ರಾಯ್‌ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಪದೇ ಪದೆ ಐಟಿ ದಾಳಿಯಿಂದ ಬೇಸತ್ತು ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

error: Content is protected !!
Scroll to Top