ಹೂಡಿಕೆ ಲಾಭ ನಂಬಿ 19 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮಂಗಳೂರು: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸುವ ಆಸೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 19 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಮಹಿಳೆಯೇ ಸ್ವತಹ ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್‌ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರು. ಹೆಚ್ಚಿನ ಲಾಭದ ಆಶೆಯಿಂದ ಈ ಆ್ಯಪ್‌ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದರು. ಜನವರಿಯಲ್ಲಿ 1 ಲಕ್ಷ ರೂ. ಲಾಭ ಅವರಿಗೆ ಸಿಕ್ಕಿತ್ತು. ಬಳಿಕ ಅವರನ್ನು ಬ್ಲಾಕ್ ಮಾಡಲಾಗಿತ್ತು.

ಮೋಸ ಹೋಗಿರುವುದು ಅರಿವಾದ ಬಳಿಕ ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ್ದಾರೆ.





















































 
 
error: Content is protected !!
Scroll to Top