ಬೀದಿ ದೀಪದ ಕಂಬ ಬಿದ್ದು ವ್ಯಕ್ತಿ ಸಾವು

ಮಂಗಳೂರು: ಬೀದಿ ದೀಪದ ಕಂಬ ಮುರಿದು ಬಿದ್ದು ಮೀನುಗಾರ ಕಾರ್ಮಿಕ ಮೃತಪಟ್ಟ ಘಟನೆ ಬಂದರು ಧಕ್ಕೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮುರುಗನ್ (35) ಎಂಬವರೇ ಮೃತ ದುರ್ದೈವಿ. ಅವರು ಧಕ್ಕೆಯಲ್ಲಿ ಮೀನು ತುಂಬಿ ತರುವುದು, ಐಸ್ ಹಾಕುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದರು.

ಮುರುಗನ್ ಮೀನು ಹೊತ್ತು ತಂದು ಕುಳಿತಿದ್ದ ವೇಳೆ ಬೀದಿ ದೀಪದ ಕಂಬ ಅವರ ಮೇಲೆ ಮುರಿದು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ಅವರು ಮೃತರಾಗಿದ್ದಾರೆ.





















































 
 

ಮೃತ ರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

error: Content is protected !!
Scroll to Top