ಮನೆಗೆ ಬಂದು ಕಾರಿನ ಗಾಜು ಒಡೆದ ಮೆಸ್ಕಾಂ ಸಿಬ್ಬಂದಿ

ಸುಳ್ಯ: ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರವೇ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದು‌‌ ಕಾರಿನ ಗಾಜನ್ನು ಹೆಲ್ಮೆಟಿನಿಂದ ಹೊಡೆದು ಹಾನಿ ಮಾಡಿರುವುದಾಗಿ ಬಾಲಚಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಬೈಕಿನಲ್ಲಿ ಬಂದು ಗೇಟಿನೊಳಕ್ಕೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾನೆ. ಆತನನ್ನು ಮನೆಯಲ್ಲಿ ಇದ್ದವರು ಪ್ರಶ್ನೆ ಮಾಡಿದ್ದು, ಆತ ಉತ್ತರಿಸದೇ ಜಾಗ ಖಾಲಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಾನಿಯಾದ ಗಾಜಿನ ಮೌಲ್ಯ ಐದು ಸಾವಿರ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಆರೋಪಿಯನ್ನು ಸುಪ್ರೀತ್ ಎಂದು ಗುರುತಿಸಲಾಗಿದೆ. ಈತ ಮೆಸ್ಕಾಂ‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.





















































 
 
error: Content is protected !!
Scroll to Top