ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇವುಗಳ ಸಹಯೋಗದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ ಕಾರ್ಯಕ್ರಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮರುಳ್ಯ ಅವರು ಉದ್ಘಾಟಿಸಿ ಮಾತನಾಡಿ, ಅಮೂಲ್ಯವಾದ ಸಂಪತ್ತು ಆರೋಗ್ಯ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕ ರಮೇಶ್ ರವರು ಮಾತನಾಡಿ ಆರೋಗ್ಯ ತಪಾಸಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕುದ್ಮಾರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್ ನೂಜಿರವರು ಮಾತನಾಡಿ ಕುದ್ಮಾರು ಅಭಿವೃದ್ದಿ ಹೊಂದುತ್ತಿರುವ ಗ್ರಾಮವಾಗುತ್ತಿದ್ದು. ಗ್ರಾಮದ ಅಭಿವೃದ್ಧಿ ದೃಷ್ಟಿಯಲ್ಲಿ ನಾವೆಲ್ಲ ಕೆಲಸವನ್ನು ಮಾಡಬೇಕು, ಗ್ರಾಮದ ಪ್ರತಿಯೊಬ್ಬರು ಆರೋಗ್ಯವಂತರಾಗಬೇಕು, ಈ ನಿಟ್ಟಿನಲ್ಲಿ ಶಿಬಿರ ಆಯೋಜನೆ ಸಾರ್ಥಕವಾಗಿದೆ, ಕುದ್ಮಾರು ಸೇರಿದಂತೆ ಐದು ಗ್ರಾಮಗಳ ಜನರಿಗೆ ಇದರ ಪ್ರಯೋಜನ ಶಿಬಿರದಿಂದ ಆಗಲಿದೆ ಎಂದರು.
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್ ಪ್ರಭು, ಕೆಎಂಸಿಯ ಪಿಆರ್‌ಓ ಡಾ. ಹಾರ್ಬಟ್, ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಲಿ ಮೋರಿ, ಕುದ್ಮಾರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಕುದ್ಮಾರು ಶಾಲಾ ಮುಖ್ಯಗುರು ಮಿನಿ ವರ್ಗಿಸ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಉಪಕಾರನಿರ್ವಹಣಾಧಿಕಾರಿ ಜಲಜಾ ಎಚ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ವಂದಿಸಿದರು, ಕುದ್ಮಾರು ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾವ್ಯದರ್ಶಿ ನಾಗೇಶ್ ಕೆಡೆಂಜಿ ಕಾಠ್ಯಕ್ರಮ ನಿರೂಪಿಸಿದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಕಳುವಾಜೆ, ಜಾನ್ನೇಶ್ವರಿ ಬರೆಪ್ಪಾಡಿ, ಗಂಗಾಧರ್ ಪೆರಿಯಡ್ಕ, ತಿಮ್ಮಪ್ಪ ಬನಾರಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ರಾಜಾರಾಮ್ ಪ್ರಭು, ಗಿರಿಶಂಕರ್ ಸುಲಾಯ, ಸುರೇಶ್ ರೈ ಸೂಡಿಮುಳ್ಳು, ನಿವೃತ್ತ ಮುಖ್ಯಗುರು ಕುಶಾಲಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಯಶೋಧರ್ ಕೆಡೆಂಜಿಕಟ್ಟ, ಸೀತಾರಾಮ ಗೌಡ ಮುಂಡಾಳ, ತಾ.ಪಂ, ಮಾಜಿ ಸದಸ್ಯೆ ಲಲಿತಾ ಈಶ್ವರ್ ಬರೆಪ್ಪಾಡಿ, ದಿವಾಕರ್ ಬಸ್ತಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ಕುದ್ಮಾರು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ನವ್ಯ ಅನಾಡಿ ಹಾಗೂ ಸದಸ್ಯರುಗಳು, ಸವಣೂರು ಗ್ರಾ.ಪಂ, ಮಾಜಿ ಸದಸ್ಯರುಗಳಾದ ಪ್ರವೀಣ್ ಕೆರೆನಾರು, ತಾರಾ ಅನ್ಯಾಡಿ ಮೆದಲಾದವರು ಭಾಗವಹಿಸಿದ್ದರು.
ಸಾಮಾನ್ಯ ರೋಗ ವಿಭಾಗ, ಬಿ.ಪಿ. ಹಾಗೂ ಮಧುಮೇಹ ತಪಾಸಣೆ, ಎಲುಬು ಮತ್ತು ಕೀಲು ರೋಗ ವಿಭಾಗ, ಉಚಿತ ಲಭ್ಯ ಇರುವ ಔಷಧ ವಿತರಣೆ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ವೈದ್ಯರು ಸೂಚಿಸಿದ್ದಲ್ಲಿ ಉಚಿತ ಇಸಿಜಿ ತಪಾಸಣೆ, ಕ್ಯಾನ್ಸರ್ ರೋಗ ತಪಾಸಣೆ ವಿಭಾಗ, ಸ್ತ್ರೀ ರೋಗ ವಿಭಾಗ, ಕಣ್ಣಿನ ವಿಭಾಗ, ಮಕ್ಕಳ ವಿಭಾಗ, ಹೃದಯ ರೋಗ ವಿಭಾಗ ಕೆಎಂಸಿ ಆಸ್ಪತ್ರೆಯ ಬಾಯಲ್ಲಿ ಕಾರ್ಡಿನ ನೋಂದಾವಣೆ ಮುಂತಾದ ತಪಾಸಣೆಗಳನ್ನು ಹಾಗೂ ಮಾಹಿತಿಗಳನ್ನು ಕೆಎಂಸಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರುಗಳ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಆರೋಗ್ಯ ಶಿಬಿರದಲ್ಲಿ ಕೃಷಿಕ ಸಮಾಜ ಕಡಬ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಣಿಯೂರು, ಮಹಿಳಾ ಮಂಡಲ ಕುದ್ಮಾರು, ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ, ಸವಣೂರು ಯುವಕ ಮಂಡಲ ಸವಣೂರು, ಸ್ನೇಹಿತರ ಬಳಗ, ಕುದ್ಮಾರು, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಝಾನ್ಸಿ ಯುವತಿ ಮಂಡಲ, ಕುದ್ಮಾರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು, ಬೆಳಂದೂರು ಗ್ರಾಮ ಪಂಚಾಯತ್, ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು, ತಿರಂಗ ವಾರಿಯರ್ಸ್ ಕುದ್ಮಾರು, ಪ್ರಗತಿಬಂಧು ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುದ್ಮಾರು ಒಕ್ಕೂಟ, ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲ ಬರೆಪ್ಪಾಡಿ ಈ ಸಂಘ ಸಂಸ್ಥೆಗಳು ಸಹಕರಿಸಿದವು.
ಸಾರ್ವಜನಿಕರು ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ಈ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು.
























