ಉಪ್ಪಿನಂಗಡಿ : ರೈಲಿನಡಿಗೆ ತಲೆಯಿಟ್ಟು ಯುವಕ ಆತ್ಮಹತ್ಯೆ

ರೈಲಿನಡಿಗೆ ಬಿದ್ದು ಯುವಕ ಮೃತ್ಯು ಎಂದು ವರದಿಯಾಗಿದ್ದ ಪ್ರಕರಣ

ಉಪ್ಪಿನಂಗಡಿ : ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಹಾರಾಡಿ ಸೇತುವೆಯ ಸಮೀಪ ಶುಕ್ರವಾರ ರೈಲು ಢಿಕ್ಕಿಯಾಗಿ ಯುವಕ ಮೃತಪಟ್ಟ ಘಟನೆ ಸಂಭವಿಸಿದ್ದು, ಇದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಬಳಿಯ ಗೌಂಡತ್ತಿಗೆ ನಿವಾಸಿ ಪವನ್ ಕುಮಾರ್ (26) ಮೃತ ಯುವಕ.

ಸರಕು ಸಾಗಿಸುವ ಹಡಗಿನಲ್ಲಿ ಉದ್ಯೋಗಿಯಾಗಿದ್ದ ಪವನ್ ಕೆಲವು ತಿಂಗಳಿನಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದರು. ಶುಕ್ರವಾರ ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದ ಈತ ತಾಯಿ ಬಳಿ ನಾನು ಸಾಯುತ್ತೇನೆ ಎಂದು ಹೇಳಿದ್ದರಂತೆ. ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನ ಡಿಪಿಯಲ್ಲೂ ‘ಐ ಆ್ಯಮ್ ಡೆಡ್’ ಎಂದು ಡಿಪಿ ಹಾಕಿದ್ದ.





















































 
 

ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆ.20ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ರೈಲಿನ ಚಾಲಕ ಸ್ಟೇಷನ್‌ಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಂಗಳೂರಿಗೆ ರವಾನಿಸಿದ್ದರು.

ಮಗ ಮನೆಯಿಂದ ಹೋದವ ಹಿಂದಿರುಗಿ ಬರಲಿಲ್ಲವೆಂದು ಪವನ್ ತಾಯಿ ರಾತ್ರಿ ಉಪ್ಪಿನಂಗಡಿ ಗ್ರಾ.ಪಂ ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರಿಗೆ ತಿಳಿಸಿದ್ದಾರೆ. ಪವನ್ ಬಗ್ಗೆ ಅವರು ಮಾಹಿತಿ ಕಲೆ ಹಾಕುತ್ತಿದ್ದಾಗ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿರುವ ವಿಚಾರ ತಿಳಿದುಬಂತು. ಪರಿಶೀಲನೆ ನಡೆಸಿದಾಗ ಇದು ಪವನ್ ಮೃತದೇಹ ಎಂಬುದಾಗಿ ತಿಳಿದುಬಂದಿದೆ.

ತೀರಾ ಬಡಕುಟುಂಬವಾಗಿದ್ದು, ತಂದೆಯಿಲ್ಲದ ಈತನನ್ನು ತಾಯಿ ಕೂಲಿ ಕೆಲಸ ಮಾಡಿ ಓದಿಸಿ ಬೆಳೆಸಿದ್ದರು. ಈತನ ಸಹೋದರಿ ಅರ್ಧದಲ್ಲೇ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಳು. ಮಾನಸಿಕ ಖಿನ್ನತೆ ಪವನ್ ಆತ್ಮಹತ್ಯೆಗೆ ಶರಣಾಗಲು ಕಾರಣ ಎನ್ನಲಾಗಿದೆ.

error: Content is protected !!
Scroll to Top