ನವದೆಹಲಿ: ಎರಡು ವರ್ಷದ ಮಗುವನ್ನು ಸ್ವಂತ ಚಿಕ್ಕಮ್ಮನೇ ಕತ್ತು ಹಿಸುಕಿ ಕೊಂದಿರುವ ಘಟನೆ ನವದೆಹಲಿಯ ಮುಖರ್ಜಿ ನಗರದ SFS ಫ್ಲ್ಯಾಟ್‌ಗಳ ಹತ್ತಿರದ ಉದ್ಯಾನವನದಲ್ಲಿ ನಡೆದಿದೆ.
ಆರೋಪಿ ಅಜ್ರಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಬಾಲಕನನ್ನು ಹಾದಿ ಎಂದು ಗುರುತಿಸಲಾಗಿದ್ದು, ಆತ ತನ್ನ ತಾಯಿಯ ಜೊತೆ ಅಜ್ಜಿ ಮನೆಗೆ ಬಂದಿದ್ದ. ಮಧ್ಯಾಹ್ನದ ವೇಳೆ ಮಗುವಿನ ತಾಯಿಯ ತಂಗಿ ಹಾದಿಯನ್ನು ಉದ್ಯಾನಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ಅವಳು ಮಗುವನ್ನು ಕೊಂದಿರುವ ಆರೋಪ ಕೇಳಿ ಬಂದಿದೆ. ಆ ಬಳಿಕ ಶವವನ್ನು ತನ್ನ ಮಡಿಲಲ್ಲೇ ಇಟ್ಟು ಕೂತಿದ್ದಾಳೆ.
ಈ ದೃಶ್ಯಗಳನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆಕೆಯಿಂದ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಈ ಕೃತ್ಯಕ್ಕೆ ಕಾರಣ ಏನು ಎಂಬುದರ ಪತ್ತೆಗೆ ಮುಂದಾಗಿದ್ದಾರೆ.
























