ಬೆಳ್ತಂಗಡಿ: ಕುತ್ಲೂರಿನಲ್ಲಿ 2012 ರಲ್ಲಿ ಮಾವೋವಾದಿಗಳಿಗೆ ಸಂಬಂಧಿಸಿದ ಕರಪತ್ರ ಹಂಚಿದ ಪ್ರಕರಣದ ಆರೋಪಿ ನಕ್ಸಲೈಟ್ ಮಹೇಶ್ ಯಾನೆ ಜಯಣ್ಣ ಯಾನೆ ಜಾನ್ ಎಂಬಾತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೇರಳದ ತ್ರಿಶೂರ್‌ನ ಕಾರಾಗೃಹದಿಂದ ಬಂಧಿತನನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈತ ಮೋಸ್ಟ್ ವಾಂಟೆಡ್ ನಕ್ಸಲೈಟ್ ಆಗಿದ್ದು, ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯವ. ಈತನಿಗೆ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ಎಂಬ ಹೆಸರುಗಳಿವೆ. ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ತೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣವನ್ನು ಮರು ತನಿಖೆಗೆ ಆದೇಶ ಹೊರಡಿಸಿದ ಕಾರಣ ಆತನನ್ನು ಬೆಳ್ತಂಗಡಿ ನ್ಯಾಯಲಕ್ಕೆ ಹಾಜರು ಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದು, ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಸಹ ರಾಜ್ಯದ ಸಿಎಂ ಮುಂದೆ ಶರಣಾತಿಯಾಗಿದ್ದನು.
























