ಉಡುಪಿ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಶಿರ್ವದ ಪಂಜಿಮಾರು ಪಾಲಮೆಯಲ್ಲಿ ನಡೆದಿದೆ. ಈ ಸ್ಕೂಟರ್ ಅನ್ನು ಕೇವಲ ಒಂದು ತಿಂಗಳ ಹಿಂದಷ್ಟೇ ಖರೀದಿ ಮಾಡಲಾಗಿತ್ತು.
ಮಂಗಳೂರಿನಿಂದ ಕೇವಲ ಒಂದು ತಿಂಗಳ ಹಿಂದಷ್ಟೇ ಸ್ಕೂಟರ್ ಅನ್ನು ಖರೀದಿ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಮನೆಯ ಅಂಗಳದಲ್ಲಿ ಅದನ್ನು ಮಾಲೀಕರು ಪಾರ್ಕ್ ಮಾಡಿದ್ದರು. ದಿಢೀರ್ ಎಂದು ಅದಕ್ಕೆ ಬೆಂಕಿ ಹಿಡಿದುಕೊಂಡಿದ್ದು, ಕೆಲವೇ ಸಮಯದಲ್ಲಿ ಗಾಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಶಿರ್ವ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
























