ಫೆ.20: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠೆ

ವಿಟ್ಲ: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಫೆ.20 ರಂದು ನಡೆಯಲಿದೆ.

ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ಉಪದ್ರವಗಳು ಜಾಸ್ತಿಯಾದಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರು ಕುಟುಂಬಸ್ಥರ ಹಿರಿಯರು ಹುಲಿ, ಹಂದಿ, ಪಕ್ಷಿ ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬೀ ಶಕ್ತಿಗಳನ್ನು ಆರಾಧಿಸಲು ನಿರ್ದೇಶನವನ್ನು ಮಾಡಿ ಅವುಗಳ ಆರಾಧನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟಿರುವ ಇತಿಹಾಸ ತಾಮ್ರ ಶಾಸನಗಳಲ್ಲಿ ಇದೆ.

ಒತ್ತೆಸಾರು ತರವಾಡು ಕುಟುಂಬದಲ ಎಲ್ಲ ವಿಭಾಗದವರು ಸೇರಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನ ಹಾಗೂ ತರವಾಡು ಮನೆ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುವುದೆಂದು ತೀರ್ಮಾನಿಸಲಾಗಿದೆ.





















































 
 

ಇತ್ತೀಚಿಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಪ್ರಕಾರ ಫೆ.20 ರ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ದಿ. ಪೂವಪ್ಪ ಪೂಜಾರಿ ಒತ್ತೆಸಾರು ಉಕ್ಕುಡ, ಇವರ ಮನೆಯಿಂದ ಶ್ರೀ ರುದ್ರಚಾಮುಂಡಿ ದೈವದ ಸಾನಿಧ್ಯವನ್ನು ಭವ್ಯವಾದ ಮೆರವಣಿಗೆಯಲ್ಲಿ ತಂದು ಇತರ ಸಪರಿವಾರ ದೈವಗಳನ್ನು ಒತ್ತೆಸಾರು ತರವಾಡು ಮನೆಯಲ್ಲಿ ನಿರ್ಮಿಸಿದ ಬಾಲಾಲಯದಲ್ಲಿ ಕುಂಟು ಕುಡೇಲು ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಪ್ರತಿಸ್ಠಾಪಿಸುವುದಾಗಿ ಕುಟುಂಬದ ಗುರು ಹಿರಿಯರು ನಿಶ್ಚಯಿಸಿದ್ದು, ಈ ಶುಭ ಸಮಾರಂಭಕ್ಕೆ ತಾವೆಲ್ಲರೂ ಬಂದು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಒತ್ತೆಸಾರು ಗೌಡರ ತರವಾಡು ಸಮಿತಿ ಹಾಗೂ ಒತ್ತೆಸಾರು ಗೌಡರ ತರವಾಡು ಜೀರ್ಣೋದ್ಧಾರ ಸಮಿತಿ ಉಕ್ಕುಡ ವಿಟ್ಲ ಇವರ ಕೋರಿಕೆ.

error: Content is protected !!
Scroll to Top