ಇಂದು ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ

ಸರ್ಕಾರದ ಜೊತೆಗಿನ ಮಾತುಕತೆ ವಿಫಲ; ಮುಷ್ಕರ ಸಾಧ್ಯತೆ

ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಸಿಡಿದೆದ್ದಿರುವ ಸಾರಿಗೆ ನೌಕರರ ಮನವೊಲಿಸುವ ಪ್ರಯತ್ನ ವಿಫಲಗೊಂಡಿದೆ. ಸರ್ಕಾರ ಕೊಟ್ಟಿರುವ ಆಫರ್‌ಗೆ ಬಗ್ಗದ ನೌಕರರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಸಂಪೂರ್ಣ ಬೇಡಿಕೆ ಈಡೇರಲೇಬೇಕು ಏಂಬ ಬೇಡಿಕೆಯೊಂದಿಗೆ ಇಂದು ಬೆಂಗಳೂರು ಚಲೋಗೆ ಮುಂದಾಗಿದ್ದಾರೆ.

ಸಾರಿಗೆ ನೌಕರರು ಹೋರಾಟ ಜೋರಾಗುವ ಸಾಧ್ಯತೆ ಕಂಡುಕೊಂಡ ನಿನ್ನೆ ಸರ್ಕಾರ, ನೌಕರರನ್ನು ಸಮಾಧಾನ ಪಡಿಸುವ ಯತ್ನಕ್ಕೆ ಮುಂದಾದರೂ ಪ್ರಯೋಜನ ಆಗಿಲ್ಲ. ನೌಕರರ ಬೇಡಿಕೆ ಪ್ರಕಾರ ಸರ್ಕಾರ 38 ತಿಂಗಳ ಹಿಂಬಾಕಿ ಮತ್ತು 2024ರಿಂದ ವೇತನ ಪರಿಷ್ಕರಣೆ ಮಾಡಬೇಕಿದೆ. ಆದರೆ ಇದಕ್ಕೆ ಒಪ್ಪದ ಸರ್ಕಾರ, 26 ತಿಂಗಳ ಹಿಂಬಾಕಿಯೊಂದಿಗೆ 2025ರಿಂದ ವೇತನ ಪರಿಷ್ಕರಣೆ ಆದೇಶ ಮಾಡಿ, ನೌಕರರ ಮನವೊಲಿಸಲು ಮುಂದಾಗಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸೊಪ್ಪು ಹಾಕದ ನೌಕರರು ಇಂದು ಬೆಂಗಳೂರು ಚಲೋಗೆ ಕರೆಕೊಟ್ಟಿದ್ದಾರೆ.





















































 
 

ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ನಾಲ್ಕು ಗಂಟೆವರೆಗೆ ಬೇಡಿಕೆ ಈಡೇರಿಕೆಗೆ ಅವಕಾಶ ನೀಡಿದ್ದು, ಸರ್ಕಾರ ಇದಕ್ಕೆ ಒಪ್ಪದಿದ್ದರೆ ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗುವ ನಿರ್ಧಾರ ಮಾಡುವ ಸಾಧ್ಯತೆ ಇದೆ.

error: Content is protected !!
Scroll to Top