ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು

ಬೆಂಗಳೂರು: ತನ್ನ ಜನ್ಮದಿನದಂದೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರದ ಐವರಕಂಡಪುರದಲ್ಲಿ ನಡೆದಿದೆ.

ಪವನ್ (24) ಎಂಬಾತನೇ ಮೃತ ದುರ್ದೈವಿ.

ಗೆಳೆಯರ ಜೊತೆಗೆ ಬರ್ತ್‌ಡೇ ಮಾಡಿ ಪವನ್ ಮನೆಗೆ ತೆರಳುತ್ತಿದ್ದು ಈ ವೇಳೆ ಆತನ ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ‌ವಾಹನ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ‌ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.





















































 
 

ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಾ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

error: Content is protected !!
Scroll to Top