ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಅವುಗಳು ಸುರಕ್ಷಿತವಲ್ಲ ಎನ್ನುವ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಂಸ್ಥೆಯು ತಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಎನ್ನುವುದಾಗಿ ಮಾಹಿತಿ ನೀಡಿದೆ.
ಹಾಗೆಯೇ ಸುಳ್ಳು ಆರೋಪಗಳನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಕರ್ನಾಟಕ ಹಾಲು ಒಕ್ಕೂಟ ನೀಡಿದೆ.
ನಂದಿನಿ ಉತ್ಪನ್ನಗಳ ವಿಚಾರದಲ್ಲಿ ಸಂಸ್ಥೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಎಲ್ಲಾ ಸೂಚನೆಗಳನ್ನು, ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದೆ. ನಂದಿನಿ ಹಾಲು ಮತ್ತು ಇತರ ಉತ್ಪನ್ನಗಳು ಸುರಕ್ಷಿತವಾಗಿವೆ. ಸ್ವಚ್ಚ ಮತ್ತು ಗುಣಮಟ್ಟದ್ದಾಗಿವೆ ಎಂದು ಸಂಸ್ಥೆ ಗ್ರಾಹಕರಿಗೆ ಭರವಸೆ ನೀಡಿದೆ.
ಹಾಗೆಯೇ ಸಂಸ್ಥೆಯ ಉತ್ಪನ್ನಗಳ ಮೇಲೆ ಯಾರಾದರೂ ಅಪಪ್ರಚಾರ ಮಾಡಿದಲ್ಲಿ, ಸುಳ್ಳು ಸುದ್ದಿಗಳನ್ನು ದುರುದ್ದೇಶಪೂರಿತವಾಗಿ ಹಬ್ಬಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು KMF ನೀಡಿದೆ.
























