ಬೆಂಗಳೂರು: ಕೆಲಸಕ್ಕಿದ್ದ ಮನೆಯಿಂದ 200 ಗ್ರಾಂ ಚಿನ್ನಾಭರಣ ಎಗರಿಸಿ, ಅದರಿಂದ ಸಿಕ್ಕ ಹಣವನ್ನು ಬಳಸಿ ತಮಿಳುನಾಡಿನಲ್ಲಿ ಜಮೀನು ಖರೀದಿಸಿದ್ದ ಕತರ್ನಾಕ್ ಕಳ್ಳಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ದೀಪ ಎಂದು ಗುರುತಿಸಲಾಗಿದೆ. ಈಕೆ ತಮಿಳುನಾಡಿನವಳಾಗಿದ್ದು, ಕೋಣನಕುಂಟೆಯ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಳು.
ಕಳ್ಳಿ ಚಿನ್ನಾಭರಣಗಳನ್ನು ಒಂದೇ ಬಾರಿಗೆ ಕಳ್ಳತನ ಮಾಡುತ್ತಿರಲಿಲ್ಲ. ಬದಲಾಗಿ ಒಂದೊಂದಾಗಿಯೇ ಕದ್ದು ಅದರಿಂದ ಸೈಟ್ ಖರೀದಿಸಿದ್ದಳು. ಆಕೆಯ ಕೃತ್ಯದ ಬಗ್ಗೆ ಸಂದೇಹಗೊಂಡ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದ ವೇಳೆ ಆಕೆ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಆಕೆ ಕಳ್ಳತನ ಮಾಡಿದ್ದ 200 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
























