ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಾರಿಷಸ್‌‌ಗೆ ಇಂಟರ್ನ್‌ಶಿಪ್‌ಗೆ ಆಯ್ಕೆ

ಪುತ್ತೂರು: ಸಂಪ್ಯದ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟಿನ ಮುಖಾಂತರ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದ್ದು, ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಏವಿಯೇಷನ್(Aviation), ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಹಾಸ್ಪಿಟಾಲಿಟಿ ಸೈನ್ಸ್(Hotel Management) ಕೋರ್ಸ್ಗಳನ್ನು ಪರಿಚಯಿಸಿದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಈಗಾಗಲೇ ಸತತ ಮೂರು ವರ್ಷಗಳಿಂದ ಏವಿಯೇಷನ್ ಕೋರ್ಸ್ ಮುಖಾಂತರ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗವನ್ನು ಪಡೆದುಕೊಂಡು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಇದೇ ಶೈಕ್ಷಣಿಕ ವರ್ಷದಲ್ಲಿ ಏವಿಯೇಷನ್ ಹಾಗೂ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಟರ್ನ್‌ಶಿಪ್‌ಗೆ
ಆಯ್ಕೆಯಾಗಿದ್ದು, ಸಂಸ್ಥೆಗೆ ಮತ್ತೊಂದು ಹೆಮ್ಮೆಯನ್ನು ತಂದಿದ್ದಾರೆ.

ಈ ಅಂತರರಾಷ್ಟ್ರೀಯ ಇಂಟರ್ನ್‌ಶಿಪ್‌ಗೆ ತೃತೀಯ ಬಿಕಾಂ ವಿಥ್ ಏವಿಯೇಷನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ವಿಭಾಗದ ಉಜ್ವಲ್ ಯು. ನಾಯಕ್ , ಪ್ರಜ್ಞಾ ಪಿ.ಪೂಜಾರಿ, ಮೋಕ್ಷಿತಾ ಕೆ, ಕೌಶಿಕ್ ವೈ.ಎನ್, ನಿಹಾ ಪರ್ವಿನ್ ಹಾಗೂ ವರುಣ್ ದೀಪ್ ಮತ್ತು ತೃತೀಯ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಲಿಕಿತ್ ಪಿ, ಅಖಿಲೇಶ್ ಜೆ.ಎಂ, ಸಿಂಚನ್ ಬಿ.ಎಸ್, ನಂದನ್, ಚಿತ್ರ, ಗೀತಾ ಹಾಗೂ ಬಿಂದುಶ್ರೀ ಸಿ.ಆರ್ ತೆರಳಿದ್ದು ಇನ್ನೂ ಸುಮಾರು 15 ವಿದ್ಯಾರ್ಥಿಗಳು ಫೆಬ್ರವರಿ ಅಂತ್ಯದಲ್ಲಿ ತೆರಳಲಿದ್ದಾರೆ.





















































 
 

ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಭವಿಷ್ಯದಲ್ಲಿಯೂ ಇನ್ನಷ್ಟು ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ

error: Content is protected !!
Scroll to Top