ಶಿವಮೊಗ್ಗ: ಯುವತಿಯೊಬ್ಬಳು ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದಳು ಎನ್ನುವ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಬಿಯರ್ ಬಾಟಲಿನಿಂದ ಚುಚ್ಚಿದ ಘಟನೆ ತೀರ್ಥಹಳ್ಳಿಯ ಆಲ್ಮನೆಯಲ್ಲಿ ನಡೆದಿದೆ.
ಆರೋಪಿಯನ್ನು ಸ್ವರೂಪ್ ಎಂದು ಗುರುತಿಸಲಾಗಿದೆ. ಆತ ಕೆಲ ದಿನಗಳ ಹಿಂದೆ ಓರ್ವ ಯುವತಿಗೆ ಪ್ರೇಮಿಸುವುದಾಗಿ ತಿಳಿಸಿದ್ದ. ಆದರೆ ಆ ಯುವತಿ ಅದನ್ನು ತಿರಸ್ಕರಿಸಿದ್ದಾಳೆ.
ಇದರಿಂದ ಕುಪಿತನಾದ ಆತ ಆಕೆಗೆ ಬಿಯರ್ ಬಾಟಲಿಯಿಂದ ಕೈ ಮತ್ತು ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ಯುವಕ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದು ಆತನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಾಳು ಯುವತಿಗೆ ನಗರದ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ.
























