ಜಿಎಸ್‌ಟಿ ವಂಚಿಸಿದ್ದಕ್ಕೆ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು

ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾದ ಹೈಕೋರ್ಟ್‌ ತೀರ್ಪು

ಬೆಂಗಳೂರು: ಕಾಂಗ್ರೆಸ್‌ನ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ 300 ಕೊಟಿ. ರೂ.ಗೂ ಅಧಿಕ ಸಂಪತ್ತು ಹೊಂದಿರುವ ಬಾಗೇಪಲ್ಲಿಯ ಶಾಸಕ ಸುಬ್ಬಾರೆಡ್ಡಿಯವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್‌ ನಿನ್ನೆ ಮಹತ್ವದ ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ.

ಹಿರಿಯ ವಕೀಲೆ ನಳಿನಿ ಮಾಯಗೌಡ ಅವರು ಸುಬ್ಬಾರೆಡ್ಡಿ ವಿರುದ್ಧ ವಾದಿಸಿದ್ದರು. ಸುಬ್ಬಾರೆಡ್ಡಿ ಸೊತ್ತಿನ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು. ಜಿಎಸ್‌ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಹೈಕೋರ್ಟ್ ಅಸಿಂಧು ಮಾಡಿದೆ. ಇದರ ಜೊತೆ ನನ್ನನ್ನು ಶಾಸಕನಾಗಿ ಡಿಕ್ಲೇರೇಷನ್ ಕೊಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನು ಅನರ್ಹ ಮಾಡಿದೆ. ಆದರೆ ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶ ಇದೆ.





















































 
 

ನಾವು ಪ್ರಾಪರ್ಟಿ ಟ್ಯಾಕ್ಸ್ ಪೇ ಮಾಡಿ ಎಂದು ವಾದ ಮಾಡಿದ್ದೇವೆ. ಹೋಟೆಲ್, ಲಿಕ್ಕರ್ ಅಂಗಡಿಯ ಟ್ಯಾಕ್ಸ್ ಕಟ್ಟಿರಲಿಲ್ಲ. ಅದಕ್ಕೆ ದಾಖಲಾತಿ ಕೊಟ್ಟಿದ್ದೇವೆ. ಜಿಎಸ್ಟಿ ಕಟ್ಟಿರಲಿಲ್ಲ. ಅವರ ಹೆಂಡತಿ, ಪುತ್ರಿಯ ಪ್ರಾಪರ್ಟಿ ಬಹಿರಂಗ ಮಾಡಿರಲಿಲ್ಲ. ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್‌ಗೆ ಹೋದರೂ ನಾವು ದಾಖಲೆ ಸಮೇತ ಹೋರಾಟ ಮಾಡುತ್ತೇವೆ. ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ. ಶಾಸಕರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದ್ದೇವೆ. ಕರಪ್ಟ್ ಶಾಸಕರನ್ನ ಮುಂದುವರಿಯುವುದಕ್ಕೆ ಬಿಡಬಾರದು ಎಂದು ವಾದ ಮಾಡಿದ್ದೇವೆ ಎಂದು ನಳಿನಿ ಮಾಯಗೌಡ ತಿಳಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ.

ಒಂದು ತಿಂಗಳ ಕಾಲ ಆದೇಶ ಅಮಾನತಿನಲ್ಲಿಡಲು ಸುಬ್ಬಾರೆಡ್ಡಿ ಪರ ವಕೀಲರು ಮನವಿ ಮಾಡಿದರು. ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮುನಿರಾಜು ತನ್ನನ್ನು ವಿಜಯಿ ಎಂದು ಘೋಷಿಸಲು ಮನವಿ ಮಾಡಿದ್ದರು. ಈ ಮನವಿಯನ್ನು ಸಹ ಕೋರ್ಟ್‌ ತಿರಸ್ಕರಿಸಿದೆ. ಚುನಾವಣಾ ಆಯೋಗಕ್ಕೆ ಮರುಚುನಾವಣೆ ಮಾಡುವ ಅಧಿಕಾರ ಇದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

error: Content is protected !!
Scroll to Top