ರಸ್ತೆ ಅವ್ಯವಸ್ತೆಗೆ ಬಲಿಯಾಯ್ತು 2 ವರ್ಷದ ಕಂದನ ಜೀವ

ಬೆಂಗಳೂರು: ರಸ್ತೆ ಅವ್ಯವಸ್ಥೆಯಿಂದಾಗಿ ಎರಡು ವರ್ಷದ ಕಂದಮ್ಮ ಮೃತಪಟ್ಟ ಘಟನೆ ಮಹದೇವಪುರದಲ್ಲಿ ‌ನಡೆದಿದೆ.

ರಸ್ತೆ ದುರಸ್ತಿ ವಿಳಂಬದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ನಡೆದಿದೆ. ಮಗು ಇದ್ದ ಬೈಕ್‌ಗೆ ಹಿಂದಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಕೆಳಕ್ಕೆ ಬಿದ್ದು ಮೃತಪಟ್ಟಿದೆ.

ಮೃತ ಮಗುವನ್ನು ತ್ರಿಶೂಲ್ ಎಂದು ಗುರುತಿಸಲಾಗಿದೆ. ಮಗು ಕೆಳಕ್ಕೆ ಬಿದ್ದಾಗ ಅದರ ತಲೆಯ ಮೇಲೆ ಕಾರು ಹರಿದು ಹೋಗಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಅಪಘಾತಕ್ಕೆ ಅರೆಪೂರ್ಣವಾದ ರಸ್ತೆಗಳ ಅವ್ಯವಸ್ಥೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.





















































 
 

error: Content is protected !!
Scroll to Top