ಟಿ20 ವಿಶ್ವಕಪ್‌ : ಭಾರತದ ಬೌಲಿಂಗ್‌ಗೆ ಪಾಕಿಸ್ತಾನ ಧೂಳೀಪಟ

61 ರನ್‌ಗಳ ಗೆಲುವಿನೊಂದಿಗೆ ಸೂಪರ್‌ 8ಕ್ಕೆ ಟೀಮ್‌ ಇಂಡಿಯಾ ಎಂಟ್ರಿ

ಕೊಲಂಬೊ: ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗದಲ್ಲಿ ಪಾರಮ್ಯ ಮೆರೆದ ಭಾರತ 61 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಇತಿಹಾಸ ನಿರ್ಮಿಸಿದೆ. ದಾಖಲೆಯ ಜಯದೊಂದಿಗೆ ಗ್ರೂಪ್‌ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್‌ 8 ಹಂತವನ್ನು ಪ್ರವೇಶಿಸಿದೆ.

ಗೆಲ್ಲಲು 176 ರನ್‌ಗಳ ಕಠಿಣ ಗುರಿ ಪಡೆದ ಪಾಕಿಸ್ತಾನ 18 ಓವರ್‌ಗಳಲ್ಲಿ114 ರನ್‌ ಗಳಿಸಿ ಹೀನಾಯ ಸೋಲು ಕಂಡಿದೆ. ಶಿವರಾತ್ರಿಯಂದೇ ಭಾರತ ತಂಡ ಶಿವತಾಂಡವವಾಡಿ ಪಾಕಿಸ್ತಾನವನ್ನು ಮಣಿಸಿದೆ.





















































 
 

ಪಾಕಿಸ್ತಾನದ ಪತನಕ್ಕೆ ಮುನ್ನುಡಿ ಬರೆದವರು ಹಾರ್ದಿಕ್‌ ಪಾಂಡ್ಯ. ಮೊದಲ ಓವರ್‌ನಲ್ಲೇ ಸಾಹಿಬ್‌ಜಾದಾ ಫರ್ಹಾನ್ ಶೂನ್ಯಕ್ಕೆ ಔಟ್‌ ಆದರೆ ಬಳಿಕ ಬಂದ ಸೈಮ್ ಅಯೂಬ್ 6 ರನ್, ನಾಯಕ ಸಲ್ಮಾನ್ ಆಘಾ‌ ಅವರನ್ನು ಬುಮ್ರಾ ಔಟ್‌ ಮಾಡುತ್ತಾರೆ. ತಂಡದ ಮೊತ್ತ 34 ರನ್‌ ಬಾಬರ್‌ ಅಜಂ ಔಟಾದಾಗಲೇ ಪಾಕ್‌ ಸೋಲು ಖಚಿತವಾಗಿತ್ತು.

ಪಾಕ್‌ ಪರ ಉಸ್ಮಾನ್‌ ಖಾನ್‌ 44 ರನ್‌ (34 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಭಾರತದ ಪರ ಪಾಂಡ್ಯ, ಬುಮ್ರಾ ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ತಲಾ ಎರಡು ವಿಕೆಟ್‌ ಪಡೆದರು. ಕುಲದೀಪ್‌ ಯಾದವ್‌, ತಿಲಕ್‌ ವರ್ಮಾ ತಲಾ 1 ವಿಕೆಟ್‌ ಪಡೆದರು.

ಬ್ಯಾಟಿಂಗ್‌ಗೆ ಸಹಕಾರ ನೀಡದ ಪಿಚ್‌ನಲ್ಲಿ ಇಶಾನ್‌ ಕಿಶನ್‌ ಸ್ಫೋಟಕ ಬ್ಯಾಟಿಂಗ್‌ ಭಾರತಕ್ಕೆ ನೆರವಾಯ್ತು. ಅಭಿಷೇಕ್‌ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರೂ ಇಶನ್ ಕಿಶನ್‌ ಅಬ್ಬರದ ಬ್ಯಾಟ್‌ ಬೀಸಿದರು. 27 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕಿಶನ್‌ ಅಂತಿಮವಾಗಿ 77 ರನ್‌(40 ಎಸೆತ, 10 ಬೌಂಡರಿ, 3 ಸಿಕ್ಸ್‌) ಹೊಡೆದು ಬೌಲ್ಡ್‌ ಔಟಾದರು.

ಇಶನ್‌ ಕಿಶನ್‌ ಕಿಶನ್‌ ಔಟಾದಾಗ ತಂಡದ ಮೊತ್ತ 88 ರನ್‌ ಆಗಿತ್ತು. ಎರಡನೇ ವಿಕೆಟಿಗೆ ಇಶನ್‌ ಕಿಶನ್‌ ಮತ್ತು ತಿಲಕ್‌ ವರ್ಮ 46 ಎಸೆತಗಳಲ್ಲಿ 87 ರನ್‌ ಜೊತೆಯಾಟ ಆಡಿದ್ದರು. ಇಶನ್‌ ಒಬ್ಬರೇ 76 ರನ್‌ ಹೊಡೆದಿದ್ದರು. ತಿಲಕ್‌ ವರ್ಮಾ 25 ರನ್‌(24 ಎಸೆತ, 2 ಬೌಂಡರಿ, 1 ಸಿಕ್ಸ್‌) ಸೂರ್ಯಕುಮಾರ್‌ ಯಾದವ್‌32 ರನ್‌(29 ಎಸೆತ,3 ಬೌಂಡರಿ) ಹೊಡೆದು ಔಟಾದರು.

ಕೊನೆಯಲ್ಲಿ ಶಿವಂ ದುಬೆ 27 ರನ್‌(17 ಎಸೆತ, 3 ಬೌಂಡರಿ, 1 ಸಿಕ್ಸ್‌) ರಿಂಕು ಸಿಂಗ್‌ ಔಟಾಗದೇ 11 ರನ್‌(4 ಎಸೆತ, 1 ಬೌಂಡರಿ, 1ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

ಈ ಪಂದ್ಯಕ್ಕೆ ಮೊದಲು 2022ರಲ್ಲಿ ಪಾಕ್‌ ವಿರುದ್ಧ ಮೆಲ್ಬರ್ನ್‌ನಲ್ಲಿ ಭಾರತ 160 ರನ್‌ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಈಗ 175 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡದ ದಾಖಲೆ ಬರೆದಿದೆ.

error: Content is protected !!
Scroll to Top