ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೆೊಂಡ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು

ತಿರುವನಂತಪುರಂ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 10 ತಿಂಗಳ ಮಗು ಅಲಿನ್‌ ಮೃತಪಟ್ಟಿದ್ದು, ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗುವಿನ ಪೋಷಕರು 5 ಜೀವಗಳನ್ನು ಉಳಿಸುವ ಮಹತ್ಕಾರ್ಯವನ್ನು ‌ತಮ್ಮ ನೋವಿನಲ್ಲೂ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಅಲಿನ್ ಪೋಷಕರಾದ ಅರುಣ್ ಮತ್ತು ಶೆರಿನ್ ತಮ್ಮ ಮೃತ ಪುತ್ರಿಯ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಿದ್ದು, ಆ ಮೂಲಕ ಐದು ಜೀವಗಳನ್ನು ಉಳಿಸುವ ಮೂಲಕ ಅಲಿನ್‌ನ ನೆನಪುಗಳನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆ ಮೂಲಕ ಅಲಿನ್ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದಾರೆ.

ಕೊಟ್ಟಾಯಂನಿಂದ ತಿರುವೆಲ್ಲಾ‌ಗೆ ಅಲಿನ್ ತನ್ನ ಪೋಷಕರ ಜೊತೆಗೆ ವಾಹನದಲ್ಲಿ ಹೋಗುತ್ತಿದ್ದ ವೇಳೆ ಪಲ್ಲಂ ಜಂಕ್ಷನ್ ಸಮೀಪ ಎದುರಿನಿಂದ ಬಂದ ಕಾರು ಢಿಕ್ಕಿಯಾಗಿತ್ತು. ಅಲಿನ್ ಪೋಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮಗುವಿಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿತ್ತು. ಅಮೃತಾ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಮಗಳನ್ನು ಕಳೆದುಕೊಂಡ ದುಃಖದ ನಡುವೆಯೂ ಹೆತ್ತವರು ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ.





















































 
 

ಅಂಗಾಂಗ ಸಾಗಾಟದ ವೇಳೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.

error: Content is protected !!
Scroll to Top