ಬೆಂಗಳೂರು: ಮಹಾ ಶಿವರಾತ್ರಿಯ ಪ್ರಯುಕ್ತ ಫೆ. 15 ರಂದು ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, H.A.L. ಮೂರನೇ ಹಂತ, ಹೊಸ ತಿಪ್ಪೆಸಂದ್ರದಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ವರೆಗೆ 6 ನೇ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ.
ಫೆ. 14 ರಂದು 10.30 ಕ್ಕೆ ಉತ್ಸವ ಸ್ಥಳಕ್ಕೆ ಶಿವಲಿಂಗವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ.
ಫೆ. 15 ರ ಶಿವರಾತ್ರಿಯಂದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ಶಿವಲಿಂಗ ಸ್ಥಾಪನೆ. ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆ ಬಳಿಕ ಬೆಳಗ್ಗೆ 9 ಗಂಟೆಗೊ ಅರಣೆ ಮಥನದೊಂದಿಗೆ ಅಗ್ನಿ ಜನನ ಪೂರ್ವಕ ನಿರ್ವಿಘ್ನ ಗಣಪತಿ ಹವನ, ಶ್ರೀ ರುದ್ರಯಾಗ, ಪಂಚಾಮೃತ ಅಭಿಷೇಕ ಸಹಿತ ಶತರುದ್ರಾಭಿಷೇಕ ನಡೆಯಲಿದೆ.
ಸಂಜೆ 5.30 ರಿಂದ ಮಹಾಲಿಂಗೇಶ್ವರ ದೇವರ ಉತ್ಸವ ಬಲಿ, 06:00 ರಿಂದ : ಪಂಚವಾದ್ಯಗಳೊಂದಿಗೆ ರಥೋತ್ಸವ 06:00 ರಿಂದ 090 : ನಾಟ್ಯ ಪುಷ್ಪ ಸಮರ್ಪಣೆ ರುದ್ರಪಾರಾಯಣ ಸಹಿತ ಪಂಚಾಮೃತ ಅಭಿಷೇಕ 06:30 ರಿಂದ : ವನದುರ್ಗಾ ಪೂಜೆ, ಪಂಚರುದ್ರ ಮಂತ್ರ ಮಹಾಯಾಗ, 08:30 : ಪೂರ್ಣಾಹುತಿ, ಮಹಾ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 09:00 ರಿಂದ 12ರ ವರೆಗೆ : ದ್ವಿತೀಯ ಯಾಮದ ಪೂಜೆ ಮತ್ತು ಗಾನಪುಷ್ಪ ಸಮರ್ಪಣೆ ರುದ್ರಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ರಾತ್ರಿ 12: 00 ರಿಂದ 03ರ ವರೆಗೆ : ತೃತೀಯ ಯಾಮದ ಪೂಜೆ ಮತ್ತು ಸಂಕೀರ್ತನ ಪುಷ್ಪ ಸಮರ್ಪಣೆ ರುದ್ರಪಾರಾಯಣ ಸಹಿತ ಪಂಚಾಮೃತ ಅಭಿಷೇಕ ನಡೆಯಲಿದೆ.
ರಾತ್ರಿ 3:00 ರಿಂದ 06 ರ ವರೆಗೆ : ಚತುರ್ಥ ಯಾಮದ ಪೂಜೆ ಸ್ತೋತ್ರ ಪುಷ್ಪ ಸಮರ್ಪಣೆ ರುದ್ರಪಾರಾಯಣ ಸಹಿತ ಪಂಚಾಮೃತ ಅಭಿಷೇಕಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ವಾರಣಾಸಿ ತಂಡದಿಂದ ಗಂಗಾರತಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿದ್ದು ಭಕ್ತರು ಭಾಗವಹಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























