ಸುಳ್ಯ : ಕಾರು ಚಾಲಕನೊಬ್ಬ ಪೆಎಟ್ರೋಲು ಪಂಪ್‌ನಲ್ಲಿ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡ ನಂತರ ಹಣ ಪಾವತಿಸದೆ ಪರಾರಿಯಾದ ಘಟನೆ ಅರಂತೋಡುನ ನಯಾರ ಪೆಟ್ರೋಲ್ ಪಂಪ್‌ನಲ್ಲಿ ಶುಕ್ರವಾರ ನಡೆದಿದೆ.
ಕೇರಳದ ಕಾಸರಗೋಡಿನ ನೋಂದಣಿ ಹೊಂದಿದ ಕಾರು ಪೆಟ್ರೋಲ್ ಪಂಪ್‌ಗೆ ಬಂದು ವಾಹನಕ್ಕೆ 2,510 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಪಾವತಿಸಿ ಎಂದು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿ ಪರಾರಿಯಾಗಿದ್ದಾನೆ. ಗಾಬರಿಗೊಂಡ ಪಂಪ್ ಸಿಬ್ಬಂದಿ ತಕ್ಷಣ ಜಾಲ್ಸೂರು ಚೆಕ್‌ಪೋಸ್ಟ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.
ಜಾಲ್ಸೂರು ಚೆಕ್‌ಪೋಸ್ಟ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಆಟೋ ಚಾಲಕರು ಮತ್ತು ಪೆಟ್ರೋಲ್ ಪಂಪ್ ನೌಕರರು ಪರಾರಿಯಾಗುತ್ತಿದ್ದ ವಾಹನವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅವರು ರಸ್ತೆ ತಡೆದು ಚಾಲಕನಿಗೆ ನಿಲ್ಲಿಸುವಂತೆ ಸೂಚಿಸಿದರು, ಆದರೆ ಚಾಲಕ ತಪ್ಪಿಸಿಕೊಂಡು ಪುತ್ತೂರಿನ ಕಡೆಗೆ ಪರಾರಿಯಾಗಿದ್ದಾನೆ.
ಇಲ್ಲಿಯವರೆಗೆ ಯಾರನ್ನೂ ಬಂಧಿಸಿದ ವರದಿಯಾಗಿಲ್ಲ, ಮತ್ತು ಅಧಿಕಾರಿಗಳು ಚಾಲಕನನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೋಲಿಸರು ಎಚ್ಚರಿಕೆ ನೀಡಿದ್ದಾರೆ.
























