ಕಾಣಿಯೂರು: ಶ್ರೀ ಜಗದ್ಗುರು ಶ್ರೀ ಮನ್ಮದ್ವಚಾರ್ಯ ಮೂಲ ಮಹಾಸಂಸ್ಥಾನಂ ಶ್ರೀ ಕಾಣಿಯೂರು ಮಠ, ಕಾಣಿಯೂರಿನ ಜಾತ್ರಾ ಮಹೋತ್ಸವವು ಫೆ. 20 ರಿಂದ 24 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.
ಫೆ. 13 ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಕಡಿಯುವ ಕಾರ್ಯಕ್ರಮದ ಮೂಲಕ ಜಾತ್ರಾ ಸಿದ್ಧತೆಗೆ ಚಾಲನೆ ದೊರೆತಿದೆ.

ಫೆ. 18 ರಂದು 10 ಗಂಟೆಗೆ : ಮುಂಡ್ಯ ಹಾಕುವುದು
ಫೆ. 20 ರಂದು: ಶ್ರೀ ಲಕ್ಷ್ಮೀನೃಸಿಂಹ ದೇವರು ಮತ್ತು ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆದು ಶ್ರೀ ಕಾಣಿಯೂರು ಉಳ್ಳಾಕುಲು ಸನ್ನಿಧಿಯಲ್ಲಿ ಧ್ವಜಾರೋಹಣ ನಡೆಯಲಿದೆ.
ಫೆ. 21ರಂದು ಬೆಳಿಗ್ಗೆ 6.00ಗಂಟೆಯಿಂದ: ಶ್ರೀ ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಪೂಜೆ, ನವಕ ಕಲಶಾಭಿಷೇಕ, ಗಣಹೋಮ, ಮಹಾಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ ಗಣಹೋಮ, ಮಹಾಪೂಜೆ, ರಾತ್ರಿ 7.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ. 22 ರಂದು ಬೆಳಿಗ್ಗೆ 7.30ರಿಂದ : ಮಲ್ಲಾರ್ ದೈವದ ನೇಮ, ದೈಯರ ನೇಮ, ರಾತ್ರಿ 7.00ಗಂಟೆಗೆ: ಬಯ್ಯದ ಬಲಿ ನಡೆಯಲಿದೆ.
ಫೆ.23 ರಂದು ಮಧ್ಯಾಹ್ನ ಗಂಟೆ 12.30ರಿಂದ : ಎಲ್ಯಾರ್ ದೈವದ ನೇಮ, ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3.00ರಿಂದ : ಮಾಣಿ ದೈವದ ನೇಮ, ಸಂಜೆ 5.00ರಿಂದ : ನಾಯರ್ ದೈವದ ನೇಮ, ಧ್ವಜಾವರೋಹಣ ನಡೆಯಲಿದೆ.
ಫೆ.24 ಬೆಳಿಗ್ಗೆ 9.00ಗಂಟೆಗೆ ಶ್ರೀ ಕಾಣಿಯೂರು ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಅಪರಾಹ್ನ 3.00ಗಂಟೆಗೆ : ಅಮ್ಮನವರ ಪೂಜೆ ಶಿರಾಡಿ ದೈವದ ನೇಮ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
























