ತಿರುವನಂತಪುರ: ಕೇರಳದ ಕೋಝಿಕ್ಕೋಡ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿ ಫೂಟ್ಪಾತ್ ಮೇಲೆ ದ್ವಿಚಕ್ರ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು ಪಾಠ ಕಲಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ವ್ಯಕ್ತಿಯೊಬ್ಬ ರೆಡ್ ಸಿಗ್ನಲ್ ತಪ್ಪಿಸಿಕೊಳ್ಳುವ ಆತುರದಲ್ಲಿ ಜನರು ನಡೆದಾಡಲು ಇರುವ ಫೂಟ್ಪಾತ್ ಮೇಲೆ ದ್ವಿಚಕ್ರ ವಾಹನವನ್ನು ಚಲಾಯಿಸಲು ಯತ್ನಿಸಿದ್ದಾನೆ. ಆ ವೇಳೆ ಫೂಟ್ಪಾತ್ ಮೇಲೆ ನಡೆದುಕೊಂಡು ಬರುತ್ತಿದ್ದ ಮಹಿಳೆ ಆತನ ವಾಹನದ ನೋಂದಣಿ ಸಂಖ್ಯೆಯನ್ನು ತಮ್ಮ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಆತನನ್ನು ಫೂಟ್ಪಾತ್ ಬಳಸಿ ರಸ್ತೆಗೆ ಸವಾರಿ ನಡೆಸಲು ಸಮ್ಮತಿಸಿಲ್ಲ. ಕೊನೆಗೆ ಆತ ಮುಖ್ಯ ರಸ್ತೆಗೆ ಇಳಿದು ತನ್ನ ಪ್ರಯಾಣ ಮುಂದುವರೆಸಿದ್ದಾನೆ.
ಮಹಿಳೆಯ ಜವಾಬ್ದಾರಿಯುತ ನಡವಳಿಕೆಗೆ ಎಲ್ಲರಿಗೂ ಮಾದರಿಯಾಗಿದ್ದು, ಸಾರ್ವಜನಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.
























