ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾವು: ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನ ಕಾವು ವಾರ್ಷಿಕ ಜಾತ್ರೋತ್ಸವವು ಫೆ. 27ರಿಂದ ಮಾ. 3ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ವಠಾರದಲ್ಲಿ ದೀಪ ಪ್ರಜ್ವಲನೆಯೊಂದಿಗೆ ನೆರವೇರಿತು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯೆ ಶ್ರೀಮತಿ ನವೀನಾ ಬಿ.ಡಿ., ಹಿರಿಯರಾದ ಪ್ರಕಾಶ್ ಉಂಗ್ರುಳಿತ್ತಾಯ ಹಾಗೂ ಶೇಷಪ್ಪ ಗೌಡ, ಕಾವು ಸಿ.ಎ. ಬ್ಯಾಂಕ್ ನಿರ್ದೇಶಕ ಲೋಹಿತ್ ಅಂಚಿನಡ್ಕ, ಪುತ್ತಿಲ ಪರಿವಾರ ಕಾವು ಘಟಕದ ಕಾರ್ಯದರ್ಶಿ ಯೋಗೀಶ್ ಕಾವು, ನವೋದಯ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಆಚಾರ್ಯ, ಸ್ಥಳೀಯರಾದ ವೆಂಕಪ್ಪ ಕುಲಾಲ್, ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಧರ್ಮಲಿಂಗಂ, ನಿರಂಜನ್ ಕಾವು ಹಾಗೂ ಕಿರಣ್ ಮಾಣಿಯಡ್ಕ ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತೆ ವೇದಾವತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭರತ್ ಕಾವು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ಶೋಭೆ ತಂದರು. ದೇವಸ್ಥಾನದ ವತಿಯಿಂದ ಜಾತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಮಿತಿ ಸದಸ್ಯರು ತಿಳಿಸಿದರು.





















































 
 
error: Content is protected !!
Scroll to Top