ಟೀಂ ಇಂಡಿಯಾಕ್ಕೆ ಆಟಗಾರರ ಗಾಯ, ಅನಾರೋಗ್ಯದ ಚಿಂತೆ
ನವದೆಹಲಿ : ಭಾರತ ತಂಡ ಗುರುವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಆಡಲಿದೆ. ಎದರಾಳಿ ಅಷ್ಟಾಗಿ ಬಲಿಷ್ಠವಾಗಿರದಿದ್ದರೂ ಭಾರತಕ್ಕೆ ಹಲವು ಆಟಗಾರರ ಅಸೌಖ್ಯ ಮತ್ತು ಗಾಯ ಆತಂಕ ತರಿಸಿದೆ. ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಶರ್ಮಾ ಎರಡು ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಬುಧವಾರ ತಂಡಕ್ಕೆ ಮರಳಿದ್ದಾರೆ. ಅವರು ನಮಿಬಿಯಾ ಎದುರು ಕಣಕ್ಕಿಳಿಯುವ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಬ್ಯಾಟರ್ ತಿಲಕ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಜ್ವರದಿಂದ ಚೇತರಿಕೆ ಕಂಡಿದ್ದರೂ ಈ ಪಂದ್ಯದಲ್ಲಿ ಆಡುವುದು ಅನುಮಾನವಿದೆ. ಇಶಾನ್ ಕಿಶನ್ ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪ್ರಧಾನ ಪಂದ್ಯಗಳು ಮುಂದಿರುವಾಗ ಆಟಗಾರರು ಗಾಯಗೊಳ್ಳುತ್ತಿರುವುದು ತಂಡಕ್ಕೆ ದೊಡ್ಡ ಆತಂಕ ಉಂಟು ಮಾಡಿದೆ.
2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಈ ಹಿಂದೆ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಆಗ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಒಂಬತ್ತು ವಿಕೆಟ್‌ಗಳಿಂದ ಜಯಗಳಿಸಿತ್ತು.
ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗುತ್ತದೆ. ಸಂಜೆ 6.30ಕ್ಕೆ ಟಾಸ್ ನಡೆಯಲಿದೆ.
ಭಾರತ: ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್.
ನಮೀಬಿಯಾ: ಲೌರೆನ್ ಸ್ಟೀನ್‌ಕ್ಯಾಂಪ್, ಜಾನ್ ಫ್ರಿಲಿಂಕ್, ಜಾನ್ ನಿಕೋಲ್ ಲಾಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿಟ್, ಜೇನ್ ಗ್ರೀನ್ (ವಿ.ಕೀ.), ರೂಬೆನ್ ಟ್ರಂಪೆಲ್‌ಮನ್, ಡೈಲನ್ ಲೀಚರ್, ವಿಲ್ಲೆಮ್ ಮೈಬರ್ಗ್, ಬರ್ನಾರ್ಡ್ ಸ್ಕೋಲ್ಟ್ಜ್, ಮ್ಯಾಕ್ಸ್ ಹೀಂಗೊ, ಮಲನ್ ಕ್ರುಗರ್, ಬೆನ್ ಶಿಕೊಂಗೊ, ಜ್ಯಾಕ್ ಬ್ರಾಸೆಲ್, ಜಾನ್ ಬಾಲ್ಟ್.
























