ವಿಟ್ಲ: ಐಟಿಐ ವಿದ್ಯಾರ್ಥಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿ, ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.
ಇರಿತಕ್ಕೊಳಗಾದ ಬನ್ವೂರಿನ ಮಹಮ್ಮದ್ ರಿಯಾನ್ ಮತ್ತು ಮಂಜೇಶ್ವರದ ದೈಗೋಳಿ ನಿವಾಸಿ ಯಜೇಶ್ ವಿಶ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳಾದ ರಿಯಾನ್ ಮತ್ತು ಹೇಮಂತ್ ನಡುವೆ ಜಗಳವಾಗಿದ್ದು, ಜಗಳ ಬಿಡಿಸಲು ಬಂದ ಯಜೇಶ್ಗೂ ಗಾಯಗಳಾಗಿವೆ.
ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























