ಶಾಲೆಗೆ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ ಬಂದೂಕುಧಾರಿ
ಓಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಬಂದೂಕುಧಾರಿಯೂ ಸೇರಿದಂತೆ ಒಟ್ಟು 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್ ಪಟ್ಟಣದಲ್ಲಿರುವ ಶಾಲೆಯಲ್ಲಿ ಅಪರಿಚಿತ ದುಷ್ಕರ್ಮಿಯಿಂದ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಮೃತರು ಹಾಗೂ ಉದ್ದೇಶ ಹಾಗೂ ಸಂದರ್ಭಗಳ ಕುರಿತು ಅಧಿಕಾರಿಗಳು ಮಾಹಿತಿಯನ್ನು ಇನ್ನೂ ನೀಡಿಲ್ಲ, ಸುಮಾರು 25 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಂಬ್ಲರ್ ರಿಡ್ಜ್ ಮತ್ತು ಸುತ್ತಮುತ್ತಲಿನ ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾದ ತುರ್ತು ಎಚ್ಚರಿಕೆಯಲ್ಲಿ ಶಂಕಿತರನ್ನು ಮಹಿಳೆ ಎಂದು ವಿವರಿಸಲಾಗಿದೆ. ನಿವಾಸಿಗಳು ಮನೆಯೊಳಗೆ ಉಳಿಯುವಂತೆ ಮತ್ತು ಆ ಪ್ರದೇಶಕ್ಕೆ ಹೋಗದಂತೆ ಮನವಿ ಮಾಡಲಾಗಿದೆ. ಟಂಬ್ಲರ್ ರಿಡ್ಜ್ ಪ್ರದೇಶದಲ್ಲಿರುವವರು ಒಳಗೆ ಇರುವಂತೆ, ನಿಮ್ಮ ಮನೆಯ ಬಾಗಿಲುಗಳನ್ನು ಸರಿಯಾಗಿ ಲಾಕ್ ಮಾಡಿಕೊಳ್ಳುವಂತೆ ಮತ್ತು ಈ ಸಮಯದಲ್ಲಿ ವ್ಯವಹಾರಕ್ಕೆಂದು ಮನೆಯ ಹೊರಗೆ ಹೋಗದಂತೆ ಕೇಳಿಕೊಳ್ಳಲಾಗಿದೆ.
ಇತರರೆಲ್ಲರೂ ಆ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬೇಕು ಮತ್ತು ಪೊಲೀಸರ ನಿರ್ದೇಶನಗಳು ಮತ್ತು ನಿರ್ಬಂಧಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು, ಮೂರನೇ ವ್ಯಕ್ತಿ ಚಿಕಿತ್ಸೆಗಾಗಿ ಸಾಗಿಸುವಾಗ ಸಾವನ್ನಪ್ಪಿದ್ದರು.
ಕಳೆದ ವರ್ಷ ಸಿಡ್ನಿಯಲ್ಲೂ ಇಂಥಾ ಘಟನೆ ನಡೆದಿತ್ತು ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು ಸಿಡ್ನಿಯ ಬೊಂಡಿ ಬೀಚ್ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಘಟನೆಯನ್ನುಆಘಾತಕಾರಿ ಮತ್ತು ದುಃಖಕರ ಎಂದು ಕರೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
























