ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಬೆಂಗಳೂರು: ನವಜಾತ ಶಿಶುವಿನ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಶೇಷಾದ್ರಿಪುರಂ ರೈಲ್ವೆ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದೆ.

ಮಗು ಹುಟ್ಟಿದ ಒಂದೇ ದಿನದಲ್ಲಿ ಯಾರೋ‌ ತಂದು ಕಸದ ತೊಟ್ಟಿಗೆ ‌ಎಸೆದಿದ್ದು, ಆ ರಭಸಕ್ಕೆ ಮಗು ಮೃತಪಟ್ಟಿರುವಂತಿದೆ.

ಮೃತದೇಹವನ್ನು ‌ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಕ್ರೂರಿಗಳನ್ನು ಹಿಡಿಯಲು ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.





















































 
 

error: Content is protected !!
Scroll to Top