ಉದ್ಯಮಿ ಎವಿಆರ್‌ಗೆ ಬೆದರಿಕೆ, ಹಣಕ್ಕಾಗಿ ಬೇಡಿಕೆ: ಕೃಷಿ ತಾಪಂಡ ‌ಮನೆಯಿಂದಲೇ ಆರೋಪಿ ವೈಶಾಖ್ ಬಂಧನ

ಬೆಂಗಳೂರು: ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿಗೆ ಬೆದರಿಕೆ ಒಡ್ಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ‌ ಗೆಳೆಯ ವೈಶಾಖ್‌ನನ್ನು ಎಚ್ ಎ ಎಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಕೃಷಿ ತಾಪಂಡ ಮನೆಯಲ್ಲೇ ಬಂಧಿಸಿರುವುದು ಈ ಪ್ರಕರಣದ ಕಾವು ಹೆಚ್ಚಿಸಿದೆ.

ಕಳೆದ ಜನವರಿ ತಿಂಗಳಲ್ಲಿ ಎವಿಆರ್‌ಗೆ ಕೊರಿಯರ್ ಒಂದು ಬಂದಿದ್ದು, ಅದರಲ್ಲಿ ನಿನ್ನ ಮತ್ತು ನಟಿಯ ಜಗಳವನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್‌ಗೆ ಆರರಿಂದ ಏಳು ಕೋಟಿ ರೂ. ಗಳನ್ನು ನೀಡಬೇಕು. ಇದಕ್ಕೆ ಒಪ್ಪದೇ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಆತಂಕಗೊಂಡ ಎವಿಆರ್ ಪೊಲೀಸರಿಗೆ ದೂರು ನೀಡಿದ್ದರು.





















































 
 

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯು ಕೃಷಿ ತಾ ಪಂಚ ಮನೆಯಲ್ಲೇ ಉಳಿದುಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಂದಲೇ ಅವನನ್ನು ಪೊಲೀಸರು ಬಂಧಿಸಿರುವುದಾಗಿದೆ. ಆರೋಪಿಯ ಮೊಬೈಲ್‌ಗಾಗಿಯೂ ಶೋಧ ನಡೆಸಲಾಗಿತ್ತು ಅದು ಪತ್ತೆಯಾಗಿಲ್ಲ. ಪ್ರಕರಣದಲ್ಲಿ ನಟಿ ಕೃಷಿಯ ಕೈವಾಡ ಏನಾದರೂ ಇದೆಯೇ ಎಂಬ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top