ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು

ಯದ್ವಾತದ್ವಾ ಸ್ಕೂಟಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ

ಬೆಂಗಳೂರು: ಇಬ್ಬರು ಯುವತಿಯರು ಕಂಠಪೂರ್ತಿ ಮದ್ಯ ಸೇವಿಸಿ ಹಾದಿಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಶನಿವಾರ ತಡರಾತ್ರಿ ನಡೆದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಯರು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕ್ಯಾಬ್‌ಗೆ ಡಿಕ್ಕಿ ಹೊಡೆದು ಚಾಲಕ ಜೊತೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ.

ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೆಲ ಕ್ಷಣ ಟ್ರಾಫಿಕ್‌ ಜಾಮ್‌ ಆಗಿ ಜನರು ಸೇರಿದ್ದಾರೆ. ಜನ ಸೇರುತ್ತಿದ್ದಂತೆ ಸ್ಥಳದಿಂದ ಇಬ್ಬರೂ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರು ಬೆನ್ನಟ್ಟಿ ಯುವತಿಯರನ್ನು ಹಿಡಿದಿದ್ದಾರೆ. ನಂತರ ಸಾರ್ವಜನಿಕರು ಹುಳಿಮಾವು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.





















































 
 

ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಯುವತಿಯರು ಅಸಭ್ಯ ವರ್ತನೆ ತೋರಿದ್ದಾರೆ. ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಇಬ್ಬರನ್ನು ಪೊಲೀಸರು ಈಗ ಹುಳಿಮಾವು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

error: Content is protected !!
Scroll to Top