ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದ ವಾರ್ಷಿಕ ಜಾತ್ರೋತ್ಸವ

ವೀರಮಂಗಲ: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ಫೆ. 15 ರಂದು ನಡೆಯಲಿದೆ.

ಫೆ. 9 ರಂದು ನಾಗತಂಬಿಲ, ಫೆ. 10 ರಂದು ಸಂಜೆ 6 ಗಂಟೆಗೆ ನೂತನವಾಗಿ ನಿರ್ಮಾಣವಾಗಿರುವ ಅಂಙಣಪಂಜುರ್ಲಿ ದೈವಸ್ಥಾನದ ವಾಸ್ತು ಪೂಜೆ, ಫೆ. 11 ರಂದು ಹುಲಿ ಚಾಮುಂಡಿ ಮತ್ತು ಅಂಙಣಪಂಜುರ್ಲಿ ದೈವಗಳ ಪುನಃಪ್ರತಿಷ್ಟೆ, ಫೆ. 14 ರಂದು ಕುಮಾರಧಾರಾ ನದಿಯಲ್ಲಿ ಗಂಗಾ ಪೂಜೆ, ಕಲಶ ಜಲ ಮೆರವಣಿಗೆ, ಮಹಾ ಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ರಂಗ ಪೂಜೆ ನಡೆಯಲಿದೆ.

ಫೆ. 15 ರಂದು ಬೆಳಗ್ಗೆ ಗಣಪತಿ ಹೋಮ, ಸಿಯಾಳಾಭಿಷೇಕ, ಪವಮಾನಾಭಿಷೇಕ, ನವರ ಕಲಶಾಭಿಷೇಕ, ಬೆಳಗ್ಗೆ 10 ಗಂಟೆಯಿಂದ ಭಜನೆ, ಬೆಳಗ್ಗೆ 11 ಗಂಟೆಯಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ದೈವಗಳ ಭಂಡಾರ ತೆಗೆಯುವುದು, ಸಂಜೆ ಗಂಟೆ 6 ರಿಂದ ಭಕ್ತಿ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 9 ರಿಂದ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನ ಸಂತರ್ಪಣೆ, ರಾತ್ರಿ ಗಂಟೆ 12 ರಿಂದ ದೈವಗಳ ನೇಮ ನಡೆಯಲಿದೆ.





















































 
 

ಫೆ. 16 ರಂದು ಶ್ರೀ ರಕ್ತೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗ ದೈವಗಳ‌ ನೇಮ, ಅನ್ನ ಸಂತರ್ಪಣೆ ನಡೆಯಲಿದೆ.

ಫೆ. 23 ರಂದು ವೀರಮಂಗಲ ಶ್ರೀ ಶಿರಾಡಿ ರಾಜನ್ ದೈವದ ದೊಂಪದ ಬಲಿ ನೇಮ ನಡೆಯಲಿದೆ.

ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೈವ ದೇವರುಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

error: Content is protected !!
Scroll to Top