ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರವನ್ನೇಕೆ ದೂಷಿಸುವುದು?: ರಾಜ್ಯ ಸರ್ಕಾರಕ್ಕೆ HDK ಪ್ರಶ್ನೆ

ಬೆಂಗಳೂರು: ಮೆಟ್ರೋ ದರ ಏರಿಕೆ ಖಂಡಿಸಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ ಏರಿಕೆ ಮಾಡಿದರೆ ಜನರು ಸಂತೋಷದಿಂದ ಎಲ್ಲವನ್ನೂ ಕೊಡುತ್ತಾರೆ ಎನ್ನುವುದು ಮುಖ್ಯಮಂತ್ರಿಗಳ ಭ್ರಮೆ ಎಂದು ಅವರು ತಿಳಿಸಿದ್ದಾರೆ.

ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು 20% ಇದೆ ಎಂದು ದರ ಏರಿಕೆಯನ್ನು ಕೇಂದ್ರ ಸರ್ಕಾರದ ತಲೆಗೆ ಕಟ್ಟುವುದು ಸರಿಯಲ್ಲ. ಹೆಚ್ಚಿನ ಹಣ ರಾಜ್ಯ ಸರ್ಕಾರವೇ ಈ ಯೋಜನೆಗೆ ಬಳಸಿದೆ ಎಂದಾದ ಮೇಲೆ ದರ ನಿಗದಿ ಮಾಡುವ ಅಧಿಕಾರವೂ ಅವರದ್ದೇ ಆಗಿರುತ್ತದೆ. ಆದರೂ ರಾಜ್ಯ ಸರ್ಕಾರ ಯಾಕೆ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುತ್ತದೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಆರ್ಥಿಕ ಶಕ್ತಿಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೀಡಿ ಜನರನ್ನು ಸಬಲರನ್ನಾಗಿ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಜಾಹೀರಾತು ನೀಡುತ್ತದೆ. ಜನರಲ್ಲಿ ಹಣ ಇದೆ, ನಾವು ಎಷ್ಟೇ ಬೆಲೆ ಏರಿಕೆ ಮಾಡಿದರೂ ಅವರು ಅದನ್ನು ತರಲು ಸಿದ್ಧರಿದ್ದಾರೆ ಎನ್ನುವ ಅಹಂ ಸರ್ಕಾರದ್ದು. ಇದು ಭ್ರಮೆ ಎಂದು HDK ಕೆಂಡ ಕಾರಿದ್ದಾರೆ.





















































 
 
error: Content is protected !!
Scroll to Top