ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ

ಮೊದಲ ದಿನ ಭಾರತ-ಅಮೆರಿಕ ಮುಖಾಮುಖಿ

ಮುಂಬೈ: ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಇಂದಿನಿಂದ ಶುರುವಾಗುತ್ತಿದೆ. ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಭಾರತ ತಂಡ ಸೇರಿದಂತೆ ಎಲ್ಲಾ 20 ತಂಡಗಳು ಈ ಮೆಗಾ ಟೂರ್ನಮೆಂಟ್‌ಗಾಗಿ ತಯಾರಿ ಪೂರ್ಣಗೊಳಿಸಿ ಅಖಾಡಕ್ಕಿಳಿಯಲು ಸಜ್ಜಾಗಿವೆ. ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿರುವ ಭಾರತ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಇದಕ್ಕೆ ಪೂರಕವಾಗಿ ಈ ಬಾರಿಯ ವಿಶ್ವಕಪ್ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿದೆ. ಟೂರ್ನಿಯ ಮೊದಲ ದಿನವೇ ಟೀಂ ಇಂಡಿಯಾ ಮೈದಾನಕ್ಕಿಳಿಯುತ್ತಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.

ಐಸಿಸಿ ಟಿ20 ವಿಶ್ವಕಪ್‌ ಈಗ 20 ವರ್ಷದ ಸಂಭ್ರಮದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮೊದಲ ಬಾರಿ ಟೂರ್ನಿ ಆಯೋಜಿಸಿದ್ದು 2007ರಲ್ಲಿ. ಅದರಲ್ಲಿ ಭಾರತ ಗೆದ್ದಿತ್ತು. 2007-2024ರ ನಡುವೆ ಒಟ್ಟು 9 ಬಾರಿ ಟಿ20 ವಿಶ್ವಕಪ್‌ ನಡೆದಿದೆ. ಪ್ರತಿ 2 ವರ್ಷಕ್ಕೊಮ್ಮೆ ಟೂರ್ನಿ ನಡೆಯುತ್ತದೆ. ಈ ಬಾರಿ 10ನೇ ಆವೃತ್ತಿ. ಭಾರತ ಸೇರಿದಂತೆ ಒಟ್ಟು 6 ತಂಡಗಳು ಈವರೆಗೂ ಕನಿಷ್ಠ ಒಮ್ಮೆಯಾದರೂ ಚಾಂಪಿಯನ್‌ ಆಗಿವೆ.





















































 
 

ಭಾರತ-ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯ, ಟ್ರೋಫಿ, ಸ್ಟಾರ್‌ ಆಟಗಾರರು, ಚಾಂಪಿಯನ್‌ ಟೀಮ್‌ ಅಥವಾ ಕ್ರೀಡಾಂಗಣಕ್ಕಿಂತ ಪಾಕಿಸ್ತಾನ, ಬಾಂಗ್ಲಾದೇಶ ವಿವಾದವೇ ಹೆಚ್ಚು ಸದ್ದು ಮಾಡಿತು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಹಾಗೂ ಭಾರತೀಯರ ಮೇಲಿನ ದೌರ್ಜನ್ಯ ನಡೆಯುತ್ತಿದ್ದಾಗಲೇ ಬಾಂಗ್ಲಾದೇಶ ತಂಡದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಅಮಾನತು ಮಾಡಲಾಯಿತು. ಬಳಿಕ ಬಾಂಗ್ಲಾದೇಶ ಭಾರತದಿಂದ ಹೊರಗೆ ಪಂದ್ಯಗಳನ್ನು ಆಯೋಜಿಸುವಂತೆ ಪಟ್ಟು ಹಿಡಿದಿತ್ತು. ಇದಕ್ಕೆ ಒಪ್ಪದ ಐಸಿಸಿ ಬಾಂಗ್ಲಾದೇಶ ತಂಡವನ್ನೇ ಟೂರ್ನಿಯಿಂದ ಹೊರದಬ್ಬಿತ್ತು. ಬಾಂಗ್ಲಾ ತಂಡ ಹೊರದಬ್ಬಿದ ಬಳಿಕ ಸ್ಕಾಟ್‌ಲೆಂಡ್‌ಗೆ ಅವಕಾಶ ನೀಡಲಾಯಿತು. ಈ ವಿಷಯದಲ್ಲಿ ಮೂಗುತೂರಿಸಿದ ಪಾಕಿಸ್ತಾನ ಮೊದಲು ಟೂರ್ನಿ ಬಹಿಷ್ಕರಿಸುವುದಾಗಿ ಹೇಳಿತ್ತು. ಆ ನಂತರ ಟೂರ್ನಿ ಆಡುತ್ತೇವೆ, ಆದರೆ ಭಾರತದ ವಿರುದ್ಧ ಆಡಲ್ಲ ಎಂದು ಹೇಳಿದೆ. ಆದಾಗ್ಯೂ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ವಿಶ್ವಕಪ್‌ ಆಡಲು ತೆರಳಲಿದೆ.

ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ ಆತಿಥ್ಯ ವಹಿಸುತ್ತಿದೆ. 2016ರಲ್ಲಿ ಮೊದಲ ಬಾರಿ ಭಾರತದಲ್ಲಿ ಪಂದ್ಯಗಳು ನಡೆದಿದ್ದವು. 2021ರಲ್ಲಿ ಆತಿಥ್ಯ ಹಕ್ಕು ಭಾರತಕ್ಕೆ ಸಿಕ್ಕರೂ ಪಂದ್ಯಗಳು ಕೋವಿಡ್‌ ಕಾರಣದಿಂದಾಗಿ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಗೊಂಡಿದ್ದವು. ಈ ಬಾರಿ ಭಾರತ-ಶ್ರೀಲಂಕಾ ಜಂಟಿಯಾಗಿ ಟೂರ್ನಿ ನಡೆಸುತ್ತಿವೆ. ಟೂರ್ನಿ ಆಯೋಜನೆಗೆ ಆರಂಭದಲ್ಲಿ ಶ್ರೀಲಂಕಾ ಮಾತ್ರ ಆಸಕ್ತಿ ತೋರಿತ್ತು. 2021ರಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದ ಐಸಿಸಿ, ಟೂರ್ನಿ ಲಂಕಾದಲ್ಲಿ ನಡೆಯುವುದಾಗಿ ತಿಳಿಸಿತ್ತು. ಆದರೆ ಟೂರ್ನಿಯ ವಿಸ್ತರಣೆ ಹಾಗೂ ಲಂಕಾದಲ್ಲಿ ಕ್ರೀಡಾಂಗಣಗಳ ಕೊರತೆಯ ಕಾರಣದಿಂದಾಗಿ ಭಾರತದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಆಯೋಜಿಸಲು ಐಸಿಸಿ ನಿರ್ಧರಿಸಿತು. ಶ್ರೀಲಂಕಾ ಈ ಹಿಂದೆ 2012ರಲ್ಲಿ ವಿಶ್ವಕಪ್ ಆಯೋಜಿಸಿತ್ತು.

ಟೂರ್ನಿಯಲ್ಲಿ ಒಟ್ಟು 20 ತಂಡಗಳಿವೆ. ಇದನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ಒಮ್ಮೆ ಆಡಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಸೂಪರ್‌-8 ಹಂತ ಪ್ರವೇಶಿಸಲಿವೆ. ಈ 8 ತಂಡಗಳನ್ನು ಮತ್ತೆ ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ತಂಡಗಳು ತಲಾ 1 ಬಾರಿ ಪರಸ್ಪರ ಆಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮೀಸ್‌ನಲ್ಲಿ ಗೆದ್ದ ತಂಡಗಳು ಫೈನಲ್‌ ಆಡಲಿವೆ.

error: Content is protected !!
Scroll to Top