ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ

ಬಳ್ಳಾರಿ: ನಾಗಲಕೆರೆಯಲ್ಲಿರುವ ದೇವಾಲಯವೊಂದರಲ್ಲಿ ಮಾಂಸದ ಚೀಲವೊಂದು ಪತ್ತೆಯಾದ ಘಟನೆ ನಡೆದಿದೆ.

ಆಂಜನೇಯ ದೇವಾಲಯದ ಹಿಂದಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದಿರುವ ಗರುಡ ಸ್ಥಂಬದ ಮುಂದೆ ಮಾಂಸದ ಕವರ್ ಪತ್ತೆಯಾಗಿರುವುದಾಗಿದೆ. ಬೆಳಗ್ಗಿನ ವೇಳೆ ದೇಗುಲದ ಅರ್ಚಕರ ಗಮನಕ್ಕೆ ಈ ಮಾಂಸದ ಚೀಲ ಬಂದಿದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಂಸದ ಕವರ್ ಅನ್ನು ತೆರವು ಮಾಡಿದ್ದು, ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ತಂದು ಹಾಕಿರುವುದೋ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ.





















































 
 

ಈ ಸಂಬಂಧ ಐಜಿಪಿ ಹರ್ಷ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಈ ಘಟನೆಯ ಸತ್ಯಾಸತ್ಯತೆ ಏನು ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇದನ್ನು ವೈಭವೀಕರಿಸುವುದು ಬೇಡ. ಈ ಸಂಬಂಧ ಪಾರದರ್ಶಕ ತನಿಖೆ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ. ತಪ್ಪು ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

error: Content is protected !!
Scroll to Top