ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ’ದ ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಬಂಟವಾಳ ಮೆಲ್ಕಾರ್ ಇದರ ಪುತ್ತೂರು ಘಟಕದ ಸಭೆಯು ಹೋಟೆಲ್ ಸ್ವಾಗತ್‍ನ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಸಂಚಾಲಕ ಭಾಸ್ಕರ್ ಬಾರ್ಯ ಕೇಂದ್ರ ಸಮಿತಿಯ ಚಟುವಟಿಕೆಗಳ ಮಾಹಿತಿ ಮತ್ತು ಪುತ್ತೂರು ಘಟಕದ ಪ್ರಗತಿಯ ಬಗ್ಗೆ ಸಲಹೆಗಳನ್ನು ನೀಡಿದರು.

ಮುರ ಶಿವ ಸದನದಲ್ಲಿರುವ ಆಶ್ರಮದಲ್ಲಿ ಮುಂದಿನ ಕಾರ್ಯಕ್ರಮ ನಡೆಸುವುದೆಂದು ಶಂಕರಿ ಶರ್ಮ ತಿಳಿಸಿದರು. ಮೆಲ್ಕಾರ್ ಶಂಕರಪತ್ತಿನ ಸಹಕಾರಿ ಸಂಘದ ಪಾಲುದಾರರಾಗಲು ತಿಳಿಸಲಾಯಿತು.





















































 
 

ಲೋಕೇಶ್ ಹೆಗ್ಡೆ ಪುತ್ತೂರು, ಭವಾನಿ ಶಂಕರ ಶೆಟ್ಟಿ, ಪುತ್ತೂರು, ಈಶ್ವರ ಭಟ್ ಜಿ. , ದುಗ್ಗಪ್ಪ ಎನ್., ಪದ್ಮನಾಭ ನಾಯಕ್, ಚಂಚಲಾಕ್ಷಿ ಬಾಲಕೃಷ್ಣರಾವ್ ಅನಾರು ಭಾಗವಹಿಸಿದ್ದರು.

error: Content is protected !!
Scroll to Top