ಶ್ರೀರಂಗಪಟ್ಟಣ: ವೃದ್ಧೆಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಸ್ಥಳೀಯರು ಅವರನ್ನು ಕಾಪಾಡಿದ ಘಟನೆ ನಡೆದಿದೆ.
ಚಾಮರಾಜನಗರದ ಬೆಂಡರವಾಡಿಯ ಗುಂಡಮ್ಮ (78) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು. ಕುಟುಂಬ ಕಲಹಕ್ಕೆ ಬೇಸತ್ತು ವೃದ್ಧೆ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಗಿ ತಿಳಿದು ಬಂದಿದೆ.
ವೃದ್ಧೆ ನದಿಗೆ ಹಾರಿದ್ದನ್ನು ಸ್ಥಳೀಯರು ನೋಡಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ. ನೀರಿನ ಮಟ್ಟ ಕಡಿಮೆ ಇದ್ದು, ತಕ್ಷಣವೇ ಸ್ಥಳೀಯರು ನೀರಿಗೆ ಹಾರಿ ಅವರನ್ನು ರಕ್ಷಿಸಿದ್ದಾಗಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದ ಹಾಗೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಜ್ಜಿಯ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿದ್ದಾರೆ.
























