ಬೆಂಗಳೂರಿಗರಿಗೆ ಈ ಬಾರಿಯೂ ತಟ್ಟಲಿದೆಯಾ ಕಾವೇರಿ ಬೆಲೆ ಏರಿಕೆಯ ಬರೆ?

ಬೆಂಗಳೂರು: ನಗರವಾಸಿಗಳಿಗೆ ಮೆಟ್ರೋ ಪ್ರಯಾಣ ದರ ಏರಿಕೆಯ ಜೊತೆಗೆ ಕುಡಿಯುವ ನೀರಿನ ದರವೂ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊಡೆತ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) 3% ಗಳಷ್ಟು ಕುಡಿಯುವ ಕಾವೇರಿ ನೀರಿನ ದರವನ್ನು ಏರಿಕೆ ಮಾಡುವ ಚಿಂತನೆ ನಡೆಸುತ್ತಿದೆ. ಪ್ರತಿ ವರ್ಷವೂ ನೀರಿನ ದರ ಏರಿಸುವ ಬಗ್ಗೆ ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿದ್ದು, ಅದರನ್ವಯ ಈ ವರ್ಷವೂ ದರ ಪರಿಷ್ಕರಣೆ ಮಾತುಕತೆ ನಡೆಯುತ್ತಿದೆ. ಬೆಲೆ ಏರಿಕೆಯ ಬಿಸಿ ಜನರನ್ನು ಈ ವರ್ಷವೂ ತಟ್ಟಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ನೂತನ ದರ ಎಪ್ರಿಲ್ 1 ರಿಂದ ತೊಡಗಿದಂತೆ ಜಾರಿಯಾಗುವ ಎಲ್ಲಾ ಸಾಧ್ಯತೆಯೂ ಇದೆ. ಕಳೆದ ವರ್ಷವೂ ಎಪ್ರಿಲ್ ತಿಂಗಳಿನಲ್ಲಿ ದರ ಏರಿಕೆ ಆಗಿತ್ತು.





















































 
 

error: Content is protected !!
Scroll to Top