ಯುವತಿ ನಾಪತ್ತೆ: ದೂರು ದಾಖಲು

ಉಪ್ಪಿನಂಗಡಿ: ಯುವತಿಯೊಬ್ಬಳು ಮಂಗಳವಾರ ಬೆಳಗ್ಗಿನ ಜಾವದಿಂದ ‌ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ಉರುವಾಲು ಗ್ರಾಮದ ಮಜಿಕುಡೇಲುವಿನಿಂದ ವರದಿಯಾಗಿದೆ.

ನಾಪತ್ತೆಯಾದ ಯುವತಿಯನ್ನು ಸುಪ್ರಿತಾ(20) ಎಂದು ಗುರುತಿಸಲಾಗಿದೆ.

ಸೋ‌ಮವಾರ ರಾತ್ರಿ ಎಂದಿನಂತೆ ಮಲಗಿದ್ದು, ಮಂಗಳವಾರ ಮುಂಜಾನೆ ಮನೆಯಲ್ಲಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಆ ಬಳಿಕ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ‌ತಿಳಿಸಿದ್ದಾರೆ.





















































 
 

ಕನ್ನಡ ಮತ್ತು ತುಳು ಭಾಷೆ ಬಲ್ಲವರಾಗಿದ್ದು, 10 ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ. 4 ಅಡಿ 6 ಇಂಚು ಎತ್ತರವಿದ್ದು, ಸಪೂರವಾಗಿ, ದುಂಡನೆಯ ಮುಖದವರಾಗಿದ್ದಾರೆ. ಈ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

error: Content is protected !!
Scroll to Top