ಕೇಸರಿ ಧ್ವಜ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ

ಮನೆಗೆ ನುಗ್ಗಿ ತಾಯಿ-ಮಗನನ್ನು ಯದ್ವಾತದ್ವಾ ಥಳಿಸಿದ ಯುವಕರ ಗುಂಪು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಬಗ್ಗೆ ಪೋಟೋ ಹಾಕಿದ ತಾಯಿ, ಮಗನನ್ನು ಮನೆಗೆ ನುಗ್ಗಿ ಥಳಿಸಿದ ಘಟನೆ ಥಳಿಸಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುಟಪಾಕ್ ಎಂಬ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯದಿಂದಾಗಿ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ.

ಗ್ರಾಮದಲ್ಲಿ ಶಿವ ಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಈ ಕೇಸರಿ ಧ್ವಜಗಳ ಫೋಟೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ.





















































 
 

ಕೇಸರಿ ಧ್ವಜ ಅಳವಡಿಕೆ ಮಾಡಿದ ಪೋಟೋಗಳು ಮಸೀದಿ ಮೇಲೆ ಇಟ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿದ ಹಿನ್ನಲೆಯಲ್ಲಿ 7 ಅನ್ಯಕೋಮಿನ ಯುವಕರು ಪೋಟೋ ಸ್ಟೇಟಸ್‌ ಹಾಕಿದ್ದ ರಮೇಶ್‌ ಎಂಬವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಗನಿಗೆ ಯಾಕೆ ಹೊಡೆದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ತಾಯಿ ನಾಗಮ್ಮ ಮೇಲೂ ಯುವಕರ ಗುಂಪು ಹಲ್ಲೆ ಮಾಡಿದೆ.

ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ಮಧ್ಯರಾತ್ರಿಯೇ ಶಿವ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಶಿವ, ಪಾರ್ವತಿ ಮತ್ತು ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರು ಕ್ಷಮೆ ಕೊರಬೇಕು. ಹಲ್ಲೆ ಮಾಡಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿದರು. ಹಲ್ಲೆಗೊಳಗಾದ ನಾಗಮ್ಮ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮುಲಾಂಗ, ರಿಯಾಜ್‌, ಖಾಜಾ, ಖಲೀಲ್‌, ಆಸೀಫ್‌, ಖಲೀಂ, ಸಮೀರ್‌ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

error: Content is protected !!
Scroll to Top