ಬಾರ್ಯ ದೇವಸ್ಥಾನದ ಜಾತ್ರಾ ಪ್ರಯುಕ್ತ ಗೊನೆ ಮುಹೂರ್ತ

ಉಪ್ಪಿನಂಗಡಿ: ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆ. 7ರಂದು ಜರಗಲಿರುವ ವಾರ್ಷಿಕ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತವು ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು.

ದೇವಸ್ಥಾನ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಬಾರ್ಯ ನೇತೃತ್ವದಲ್ಲಿ ಪ್ರಧಾನ ಅರ್ಚಕ ಗುರುಪ್ರಸಾದ ನೂರಿತ್ತಾಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಗೊನೆ ಮುಹೂರ್ತ ನಡೆಯಿತು

ಆಡಳಿತ ಸೇವಾ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ, ಸ್ವರ್ಣ ಲತಾ ಭಾಸ್ಕರ್, ಶ್ರೀ ವಾರಿಣಿ,ಉತ್ಸವ ಸಮಿತಿ ಸಂಚಾಲಕ ಯಜ್ಞೇಶ್ ಪುತ್ತಿಲ, ವಿಷ್ಣುಮೂರ್ತಿ ಭಟ್, ಮನೋಹರ ಶೆಟ್ಟಿ,ರಾಮಣ್ಣ, ವಿಶ್ವನಾಥ ಗೌಡ, ನಾರಾಯಣಗೌಡ, ಶ್ರೀನಿವಾಸ ಚಂದ್ರಕಾಂತ ಶೆಟ್ಟಿ, ಶಿವರಾಮ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.





















































 
 

error: Content is protected !!
Scroll to Top